Friday, December 6, 2024

Latest Posts

ಯಾವುದೇ ವಿಷಯದ ಬಗ್ಗೆ ಹೆಚ್ಚು ಚಿಂತೆ ಮಾಡುವುದನ್ನು ನಿಲ್ಲಿಸುವುದು ಹೇಗೆ..?

- Advertisement -

Health Tips: ಮನುಷ್ಯ ಅಂದ ಮೇಲೆ ಅವನ ಜೀವನದಲ್ಲಿ ಚಿಂತೆ, ಜವಾಬ್ದಾರಿ ಎಲ್ಲವೂ ಇರುತ್ತದೆ. ಹಾಗೆ ಜವಾಬ್ದಾರಿ ನಿಭಾಯಿಸುವಾಗ ಚಿಂತೆ ಮಾಡುವುದು ಸಹಜ. ಆದರೆ ಚಿಂತೆ ಜಾಸ್ತಿಯಾದ್ರೆ, ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಹೆಚ್ಚು ಚಿಂತಿಸದೇ, ಆರಾಮವಾಗಿ ಹೇಗೆ ಜೀವಿಸಬೇಕು ಅನ್ನೋ ಬಗ್ಗೆ ಸ್ವಲ್ಪ ಟಿಪ್ಸ್ ಕೊಡಲಿದ್ದೇವೆ.

ಚಿಂತೆ ಕಡಿಮೆ ಮಾಡಿಕೊಳ್ಳುವ ಮೊದಲ ವಿಧಾನ ಅಂದ್ರೆ ನೀವು ಧೈರ್ಯಶಾಲಿಯಾಗಬೇಕು. ಹಲವರಿಗೆ ನಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ. ನಾನು ಹೀಗೆ ಮಾಡಿದ್ರೆ, ಅವರು ಏನು ಹೇಳಬಹುದು. ಇವರೇನು ತಿಳಿದುಕೊಳ್ಳಬಹುದು ಅಂತಾ ಚಿಂತಿಸುವವರೇ ಹೆಚ್ಚು. ಇದೆಲ್ಲ ನಾವೇನಾದರೂ ಕೆಟ್ಟ ಕೆಲಸ ಮಾಡಲು ಮುಂದಾದಾಗ ಮಾತ್ರ ಯೋಚಿಸಬೇಕಾದದ್ದು. ಆದರೆ ನೀವು ಯಾವುದೇ ಕೆಟ್ಟ ಕೆಲಸ ಮಾಡದೇ, ಕೆಟ್ಟ ನಿರ್ಧಾರ ತೆಗೆದುಕೊಳ್ಳದೇ, ನಿಮ್ಮಷ್ಟಕ್ಕೆ ನೀವು ಜೀವನ ನಡೆಸುತ್ತಿದ್ದೀರಿ ಎಂದಲ್ಲಿ, ಯಾರು ನಿಮ್ಮ ಬಗ್ಗೆ ಏನಂದರೂ, ನಿಮಗೇನಾಗಬೇಕು..?

ಕೆಲವೊಮ್ಮೆ ಮನೆಯಲ್ಲೇ ನಿಮ್ಮ ಪ್ರತೀ ಕೆಲಸಕ್ಕೂ ಕೊಂಕು ಮಾತನಾಡುವವರು ಸಿಗಬಹುದು. ಹಾಗಿದ್ದಾಗ, ಸಾಧ್ಯವಾದರೆ, ಅಂಥವರಿಂದ ದೂರ ಹೋಗಿ. ದೂರ ಹೋಗಲಾಗುವುದಿಲ್ಲ, ಅವರೊಂದಿಗೆ ಇರಲೇಬೇಕು ಎನ್ನುವ ಪರಿಸ್ಥಿತಿ ಇದ್ದರೆ, ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬದುಕುವುದನ್ನು ಕಲಿಯಿರಿ. ಅವರೇನೆ ಎಂದರೂ, ಅದು ನಿಮಗಲ್ಲ ಎನ್ನುವ ರೀತಿ ಇರಿ. ಒಮ್ಮೆ ನೀವು ಅಂಥವರನ್ನು ನಿರ್ಲಕ್ಷಿಸುವುದನ್ನು ಕಲಿತರೆ, ನಿಮ್ಮ ಜೀವನ ಸುಖಮಯವಾಗುತ್ತದೆ.

ಎರಡನೇಯದಾಗಿ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವುದನ್ನು ಬಿಟ್ಟು ಬಿಡಿ. ನೀವು ಭವಿಷ್ಯದ ಬಗ್ಗೆ ಅಥವಾ ಕಳೆದು ಹೋದ ಘಟನೆಯ ಬಗ್ಗೆ ಎಷ್ಟೇ ಚಿಂತಿಸಿದರೂ, ಅದು ಬದಲಾಗುವುದಿಲ್ಲ. ಭವಿಷ್ಯದಲ್ಲಿ ಏನಾಗಬೇಕೋ ಅದೇ ಆಗುತ್ತದೆ. ನೀವು ಚಿಂತಿಸಿದರೆಂದು ನಿಮ್ಮ ಭವಿಷ್ಯಬದಲಾಗುವುದಿಲ್ಲ. ಅದರ ಬದಲು ವರ್ತಮಾನದಲ್ಲಿ ಖುಷಿಯಿಂದ ಬದುಕಿ.

ಇನ್ನು ಆಫೀಸಿನ ಕೆಲಸದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಚಿಂತಿಸಿ ಆಫೀಸು ಕೆಲಸ ಮಾಡುವ ಬದಲು, ಖುಷಿ ಖುಷಿಯಾಗಿ ನಿಮ್ಮ ಕೆಲಸವನ್ನು ಮಾಡಿ, ನಿಮ್ಮ ಕೆಲಸವನ್ನು ಪ್ರೀತಿಸಿ, ಆಗ ಅದು ನಿಮ್ಮ ಕೈ ಹಿಡಿಯುತ್ತದೆ. ಅದನ್ನು ಬಿಟ್ಟು ಬಾಸ್‌ಗೆ ಹೆದರಿ, ಅಥವಾ ಪತ್ನಿ ಮಕ್ಕಳ ಡಿಮ್ಯಾಂಡ್ ಪೂರ್ತಿ ಮಾಡಲು ನೀವು ಹಸಿವು, ನಿದ್ರೆ ಬಿಟ್ಟು ದುಡಿದರೆ, ನಾಳೆ ನಿಮ್ಮ ಕುಟುಂಬವೋ, ನಿಮ್ಮ ಆಫೀಸಿನವರೋ ಬಂದು ನಿಮ್ಮ ಅನಾರೋಗ್ಯ ಹಸ್ತಾಂತರಿಸಿಕೊಳ್ಳುವುದಿಲ್ಲ. ಬದಲಾಗಿ ಏನೇ ಬಂದರೂ ನೀವೇ ಅನುಭವಿಸಬೇಕು. ಹಾಗಾಗಿ ನಿಮಗಿಷ್ಟವಾದ ಕೆಲಸವನ್ನೇ ಖುಷಿಯಾಗಿ ಮಾಡಿ.

- Advertisement -

Latest Posts

Don't Miss