Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪೋಲೀಸರು ಯಾರನ್ನಾದರೂ ಬಂಧಿಸಿ, ಕೋರ್ಟ್‌ಗೆ ಕರೆತಂದಾಗ, ಆ ಆರೋಪಿಯ ಬಳಿ ಜಡ್ಜ್ ಹೇಗೆ ವಿಚಾರಣೆ ನಡೆಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಆರೋಪಿ ಜಡ್ಜ್ ಮುಂದೆ ಬಂದಾಗ, ಜಡ್ಜ್ ಆದವರು, ಆರೋಪಿಯ ಬಳಿ, ನಿಮ್ಮನ್ನು ಬಂಧಿಸಿದ ಬಳಿಕ ಪೋಲೀಸರು ನಿಮಗೇನು ಮಾಡಿದ್ರು..? ಅವರು ನಿಮಗೆ ಹಿಂಸೆ ನೀಡಿದರಾ..? ಅಥವಾ ಬರೀ ವಿಚಾರಣೆ ಮಾಡಿದರಾ..? ಏನಾದರೂ ಶಿಕ್ಷೆ ನೀಡಿದರಾ..? ಎಂದು ಕೇಳುತ್ತಾರೆ. ಆಗ ಆ ವ್ಯಕ್ತಿ ಅಳುತ್ತ, ಏನೂ ಮಾಡಿಲ್ಲಾ ಅಂತಲೇ ಹೇಳುತ್ತಾನೆ.
ಆದರೆ ಪೋಲೀಸರು ಆತನಿಗೆ ಯಾವ ರೀತಿ ಹಿಂಸೆ ನೀಡಿರುತ್ತಾರೆ ಎಂದರೆ, ನಿಲ್ಲಲಾಗದಷ್ಟು ಹಿಂಸೆ ನೀಡಿರುತ್ತಾರೆ. ಆದರೆ ಆತ ತನಗೆ ಹಿಂಸೆ ನೀಡಿದ್ದಾರೆಂದು ಹೇಳುವ ಹಾಗಿರುವುದಿಲ್ಲ. ಆದರೆ ಜಡ್ಜ್ ಅದರ ಬಗ್ಗೆ ಎಂದಿಗೂ ಪ್ರಶ್ನಿಸುವುದಿಲ್ಲ. ಬದಲಿಗೆ ಪೋಲೀಸರು ಆರೋಪಿಗೆ ಹಿಂಸಿಸಿಲ್ಲ ಎಂದೇ ಬರೆಯುತ್ತಾರೆ. ಇನ್ನು ಮೆಡಿಕಲ್ ರಿಪೋರ್ಟ್‌ನಲ್ಲೂ ಕೂಡ, ಆರೋಪಿಗೆ ಹಿಂಸೆ ನೀಡಿಲ್ಲ. ಆತ ಆರೋಗ್ಯವಾಗಿದ್ದಾನೆ ಅಂತಲೇ ಬರೆಯುತ್ತಾರೆ . ಅಪರಾಧ ಸಾಬೀತಾಗುವ ಮುನ್ನವೇ ಈ ರೀತಿ ಮಾಡಲಾಗುತ್ತದೆ ಎನ್ನುತ್ತಾರೆ ರವಿಕೃಷ್ಣ ರೆಡ್ಡಿ.




