2025ರ ನವೆಂಬರ್‌ಗೆ ರಾಜ್ಯ ಕಾಂಗ್ರೆಸ್ ಸರ್ಕಾರ, ಎರಡೂವರೆ ವರ್ಷ ಪೂರೈಸುತ್ತಿದೆ. ಸಿಎಂ ಬದಲಾವಣೆ ಕೂಗು ಪರೋಕ್ಷವಾಗಿ, ಮತ್ತೆ ಮುನ್ನೆಲೆಗೆ ಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನದಲ್ಲಿ, ಸಿಎಂ ಆಗುವ ಆಸೆ ಇನ್ನೂ ಇದೆ ಅನ್ನೋದು ಬಹಿರಂಗವಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ ಹಾಗೂ ಶಾಸಕರಾದ ಹ್ಯಾರಿಸ್ ಜೊತೆ ಡಿಕೆಶಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಾಭಾರತ ಉಲ್ಲೇಖಿಸುವ ಮೂಲಕ, ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್‌ಗೆ ಟಾಂಗ್ ಕೊಟ್ಟಿದ್ದಾರೆ.
ಅರ್ಜುನನಿಗೆ ಕೃಷ್ಣ ಹೇಳ್ತಾನೆ. ನೂರಾರು ಜನ ನಿನ್ನ ಹೊಡೆಯಬಹುದು. ನಿನ್ನ ಮೇಲೆ ಬಿಲ್ಲು ಎಸೆಯಬಹುದು. ಆದರೆ ನಿನ್ನನ್ನು ರಕ್ಷಣೆ ಮಾಡೋಕೆ ಯಾರಾದರೂ ಒಬ್ಬರು ಇರ್ತಾರೆ ಅಂತಾ ಹೇಳಿದ್ದ. ಕೊಲ್ಲಲು ನೂರು ಜನ ಇದ್ರೂ, ಕಾಯುವವನು ಒಬ್ಬ ಇರುತ್ತಾನೆ. ಈಗಿನ ರಾಜಕಾರಣಿಗಳು ಅಂತಿಮವಾಗಿ ಏನೇ ಮಾಡಿದ್ರೂ, ಅವರನ್ನು ಬದಲಾಯಿಸುವ ಅಧಿಕಾರ, ನಿಮ್ಮ ಬೆರಳ ತುದಿಯಲ್ಲಿದೆ ಅಂತಾ ಡಿಕೆಶಿ ಹೇಳಿದ್ರು.
ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ಅನ್ನುವ ಅಲಿಖಿತ ನಿಯಮ ಮಾಡಿಕೊಳ್ಳಲಾಗಿತ್ತಂತೆ. ಅದರಂತೆ ಸಿಎಂ ಆಗ್ಲೇಬೇಕು ಅಂತಾ ಡಿಕೆಶಿ ಶತಪ್ರಯತ್ನ ಮಾಡ್ತಿದ್ದಾರೆ. ದಿಲ್ಲಿಯಲ್ಲೇ ನಾನೇ ಪೂರ್ಣವಧಿ ಸಿಎಂ ಅಂತಾ ಸಿದ್ದು ಹೇಳಿದ್ರು. ಆದ್ರೂ ಡಿಕೆ ಶಿವಕುಮಾರ್ ಸಿಎಂ ಆಗುವ ಕನಸು ಮಾತ್ರ ಬಿಟ್ಟಿಲ್ಲ. ಆರ್‌ಎಸ್‌ಎಸ್ ಗೀತೆ ಹಾಡಿ ಸಾಫ್ಟ್ ಹಿಂದುತ್ವಕ್ಕೆ ಡಿಕೆ ಮುಂದಾಗಿದ್ರು. ತಮ್ಮ ಪ್ಲಾನ್ ಉಲ್ಟಾ ಹೊಡೆದು ಡಿಕೆಶಿ ಕ್ಷಮೆ ಕೇಳುವಂತಾಗಿತ್ತು. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತಾ ಹೇಳ್ತಿದ್ದಾರೆ. ಆದರೂ ಇದೇ ಅವಧಿಯಲ್ಲಿ ಸಿಎಂ ಆಗಬೇಕೆಂದು, ಡಿಕೆಶಿ ಸ್ಟ್ರ್ಯಾಟಜಿ ಮಾಡ್ತಿದ್ದಾರೆ.