ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅಭಿಮಾನಿಗಳು ಏನೇ ಮಾಡಿದ್ರೂ ಢಿಫ್ರೆಂಟಾಗಿ ಮಾಡ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಡಿ ಭಕ್ತಗಣ ಸದ್ಯ ಕ್ರಾಂತಿ ಚಿತ್ರದ ಪ್ರಚಾರವನ್ನ ಎಲ್ಲೆಡೆ ಭರ್ಜರಿಯಾಗಿ ಮಾಡ್ತಿದ್ದು, ಎತ್ತ ಕಣ್ಣಾಯಿಸಿದರೂ ಕ್ರಾಂತಿ ಹವಾ ಜೋರಾಗಿದೆ.
ಆ ಲೆವೆಲ್‌ಗೆ ದರ್ಶನ್‌ನ ಕ್ರಾಂತಿ ಸಿನಿಮಾಗೆ ಅಭಿಮಾನಿಗಳು ಪ್ರಮೋಷನ್ ಮಾಡ್ತಿದ್ದಾರೆ. ಈ ಪ್ರಚಾರಕ್ಕೆ ಮತ್ತೊಂದು ವಿಶೇಷವಾಗಿ ಸೇರ್ಪಡೆಯಾಗಿದೆ. ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯವು ಒಂದಾಗಿದೆ. ದೇವರ ಉತ್ಸವ ಹಾಗೂ ಕಲೆಯಲ್ಲಿ ಶ್ರೀಮಂತಿಕೆ ಹೊಂದಿರುವ ಈ ಸಮುದಾಯವು ಮದ್ಯ ಕರ್ನಾಟಕದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತೆ.
ಅದರಂತೆ ಕೋಟೆನಾಡು ಚಿತ್ರzದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳ ಗ್ರಾಮದ ಬಾಲಕೃಷ್ಣ ಸ್ವಾಮಿ ಹಾಗೂ ಶ್ರೀ ರಂಗನಾಥ ಸ್ವಾಮಿ ದೇವರಿಗೆ ಕುರಿ ಕಡಿಯುವ ಮೂಲಕ ಏಕಾದಶಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದರು. ವಿಶೇಷ ಅಂದ್ರೆ ಈ ಗ್ರಾಮದಲ್ಲಿರೋ ಕುರಿಗಾಹಿ ಯುವಕರು ಡಿಬಾಸ್ ಅಭಿಮಾನಿಗಳು. ಹಾಗಾಗಿ ತಮ್ಮಿಷ್ಟದ ಕುರಿಗಳ ಮೇಲೆ ಕ್ರಾಂತಿ, ದರ್ಶನ್ ಅಂತ ಬರೆದು ಚಿತ್ರತಂಡಕ್ಕೆ, ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಹರಸಿದ್ದಾರೆ.
ಅಷ್ಟೇ ಅಲ್ಲ ಕುರಿಗಳ ಮೇಲೆ ಹೆಸರು ಬರೆದು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಿದ್ದಾರೆ. ಹೀಗೆ ರಾಜ್ಯದಲ್ಲಿ ಸಾಕಷ್ಟು ಕಡೆ, ಕ್ರಾಂತಿ ಚಿತ್ರದ ಬಗ್ಗೆ ಅಭಿಮಾನಿಗಳು ಭಿನ್ನ-ವಿಭಿನ್ನವಾಗಿ ಪ್ರಚಾರ ಮಾಡ್ತಿದ್ದು, ಕ್ರಾಂತಿ ಸಿನಿಮಾದ ಅಪ್ಡೇಡ್‌ಗೂ ಸಹ ಡಿ-ಭಕ್ತಗಣ ಎದುರು ನೋಡ್ತಿದ್ದಾರೆ.