Thursday, December 5, 2024

Latest Posts

ಬೊಮ್ಮಾಯಿವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರೂ ಜನರು ಕೈ ಹಿಡಿಯಲಿಲ್ಲ: ಸಿ.ಸಿ.ಪಾಟೀಲ್

- Advertisement -

Hubli News: ಹುಬ್ಬಳ್ಳಿ: ಉಪಚುನಾವಣೆಯಲ್ಲಿ‌ ವಿಶೇಷವಾಗಿ ಜನರು ಆಡಳಿತ ಪಕ್ಷದ ಪರವಾಗಿರುತ್ತಾರೆ. ಎಲ್ಲ‌ ಸಚಿವರು‌ ಶಾಸಕರು, ಹಾಗೂ ಸಂಪನ್ಮೂಲಗಳ ಬಳಕೆ ಹೇರಳವಾಗಿರುತ್ತದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಯಾಸೀರ್ ಖಾನ್ ಪಠಾಣ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದ್ರೆ ಪಠಾಣ್ ಅವರಿಗೆ ಅಭಿವೃದ್ದಿ ಮಾಡಲು ಯಾವುದೇ ಕೆಲಸಗಳೇ ಉಳಿದಿಲ್ಲ. ಸಾಕಷ್ಟು ಪುಣ್ಯ‌ ಆಗಿದೆ ಅಂತ ಭಾವಿಸಿ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ‌ ತೀರ್ಪಿಗೆ ತಲೆ ಬಾಗಿ ಸ್ವೀಕರಿಸಲೇಬೇಕು. ಈ ಹಿಂದೆ ಬಿ.ಎಸ್.ವೈ ಅಧಿಕಾರವಧಿಯಲ್ಲಿ‌ 17 ಜನರ ರಾಜೀನಾಮೆ ಕೊಡಿಸಿ 13 ಜನ ಗೆದ್ದಿದ್ದೆವು. ಇಂದು ಸವಣೂರು ತಮ್ಮದಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ನೀರಾವರಿ ಯೋಜನೆಯಲ್ಲಿ‌ ಬೊಮ್ಮಾಯಿ‌ ಸಾಕಷ್ಟು‌ ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಮಹಾರಾಷ್ಟ್ರ ಜನತೆಗೆ ಅಭಿನಂದನೆ ಸಲ್ಲಿಸುತ್ತೇವೆ. ಯಾವುದೇ ಚುನಾವಣೆಯಲ್ಲಿ ಯಾವುದೇ ರಾಜಕಾರಣಿ ನಿರ್ಲಕ್ಷ್ಯ ವಹಿಸಲ್ಲ. ಕೆಲವೊಮ್ಮೆ ನಿರೀಕ್ಷೆ ಮಾಡಿದ ಫಲಿತಾಂಶ ಸಿಗಲ್ಲ. ನಮ್ಮ ತಪ್ಪು ಇಲ್ಲದೇ ಇದ್ದರೂ ಕೆಲವೊಮ್ಮೆ‌ ಸೋಲು ಆಗುತ್ತದೆ. ಕೆಲವೊಬ್ಬರು ಸಾಕಷ್ಟು ತಪ್ಪುಗಳು ಮಾಡಿದ್ದರೂ ಗೆಲ್ಲುತ್ತಾರೆ ಅಷ್ಟೇ ಎಂದು ಅವರು ಹೇಳಿದರು.

- Advertisement -

Latest Posts

Don't Miss