Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿರುವ ನಿಶಾ ಯೋಗಿಶ್ವರ್, ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕ“ಂಡಿದ್ದಾರೆ. ದೇವರ ಬಗ್ಗೆ ಅವರಿಗಿರುವ ಅಭಿಪ್ರಾಯ, ತಮ್ಮ ಫ್ಯಾಮಿಲಿ, ರಾಜಕೀಯಕ್ಕೆ ಬರುವ ಗುರಿ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಕುಟುಂಬ ಅಂತಾ ಬರೋದು ನಿಮ್ಮ ಗುರಿಯನ್ನು ತಲುಪುವುದಕ್ಕೆ. ಓರ್ವ ಮನುಷ್ಯನಿಗೆ ಜವಾಬ್ದಾರಿ ಅಂತಾ ಬರೋದಕ್ಕೆ ಕಾರಣ, ಅವರ ಸಂಸಾರ. ಸಂಸಾರವನ್ನು ನಡೆಸುವ ಸಲುವಾಗಿ, ದುಡಿಯುತ್ತಾನೆ. ಅದೇ ರೀತಿ ನಾನು ಕೂಡ ಜವಾಬ್ದಾರಿ ತೆಗೆದುಕ“ಂಡು, ಜೀವನಮುಖಿ ಕೆಲಸಗಳಿಗೆ ಮುಂದಾಗಿದ್ದೇನೆ ಎಂದಿದ್ದಾರೆ ನಿಶಾ.
ನಿಶಾ ಸ್ವಂತ ಉದ್ಯಮವನ್ನು ಮಾಡಿದ್ದಾರೆ. ಕೆಲಸದ ಮೇಲೆ ಬೇರೆ ಬೇರೆ ರಾಜ್ಯ, ದೇಶಗಳಿಗೆ ಹೋಗಿದ್ದಾರೆ. ಆದರೆ ಅವರಿಗೆ ತಾನು ಸರಿಯಾದ ಜಾಗದಲ್ಲಿ ಇದ್ದೇನೆ ಎಂದು ಎಂದಿಗೂ ಅನ್ನಿಸಲಿಲ್ಲ ಅಂತಾರೆ ನಿಶಾ. ಲಾಸ್ ಏಂಜಲೀಸ್‌ನಲ್ಲಿ ಕೂಡ ನಿಶಾ ಅವರ ಉದ್ಯಮವಿತ್ತು. ಆದರೆ ಅಲ್ಲಿ ಅವರಿಗೆ ನಾನು ಜೀವನದಲ್ಲಿ ಸೆಟಲ್ ಆಗಿದ್ದೇನೆ ಅಂತಾ ನನಗೆ ಅನ್ನಿಸಲಿಲ್ಲ ಅಂತಾರೆ ನಿಶಾ.
ಅಲ್ಲದೇ ನಿಶಾ ಓದಿದ್ದು ವಿದೇಶದಲ್ಲಿ. ವಿದೇಶದಲ್ಲಿ ಓದುವಾಗಲೇ ನಿಶಾಗೆ ತಮ್ಮ ದೇಶದ ಬಗ್ಗೆ ಅಭಿಮಾನ ದುಪ್ಪಟ್ಟಾಗಿದ್ದು. ನಮ್ಮ ದೇಶದಲ್ಲಿ ಜನ ನಗುತ್ತಾರೆ. ಮಾತನಾಡಿಸುತ್ತಾರೆ. ಆದರೆ ವಿದೇಶದಲ್ಲಿ ಜನ ತಮ್ಮಷ್ಟಕ್ಕೆ ತಾವಿರುತ್ತಾರೆ. ಹಾಗಾಗಿ ನಮ್ಮ ದೇಶವೇ ಚಂದವೆಂದು ನನಗನ್ನಿಸಿತು ಅಂತಾರೆ ನಿಶಾ. ಅಲ್ಲದೇ ನನಗೆ ಕರ್ನಾಟಕವೇ ಇಷ್ಟ. ಇದೇ ನನ್ನ ಕರ್ಮಭೂಮಿ ಅಂತಾ ನನಗೆ ಅನ್ನಿಸುತ್ತದೆ ಅಂತಾರೆ ನಿಶಾ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.