Chikkodi News: ಚಿಕ್ಕೋಡಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಇಂದು ಚಿಕ್ಕೋಡಿಯಲ್ಲಿ ಸರ್ಕಾರಿ ನೌಕರರ ಭವನ ಶಂಕುಸ್ಥಾಪನೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಜಿಲ್ಲೆ ರಚನೆ ಯಾವಾಗ ಎಂಬ ವಿಚಾರದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಎಲ್ಲರೂ ಚಿಕ್ಕೋಡಿ ಜಿಲ್ಲೆಯ ರಚನೆಯ ಪರವಾಗಿದ್ದೇವೆ. ಯಾರೂ ಸಹ ವಿರೋಧ ಮಾಡ್ತಿಲ್ಲ. ಈಗಾಗಲೆ ಹಲವು ವರದಿಗಳಲ್ಲಿ ಜಿಲ್ಲೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಸರ್ಕಾರ ಜಿಲ್ಲೆ ರಚನೆ ಮಾಡುವ ಬಗ್ಗೆ ನಿರ್ಧಾರ ತೆಗದುಕೊಳ್ಳಲಾಗುತ್ತದೆ. ಸರ್ಕಾರಕ್ಕೆ ಪ್ರಸ್ತಾವನೆ ಕೊಡುವ ಅವಶ್ಯಕತೆ ಇಲ್ಲ. ಜಿಲ್ಲೆ ರಚನೆ ಮಾಡೋದಕ್ಕೆ ಇಂತಿಷ್ಟು ನಿರ್ದಿಷ್ಟ ಸಮಯ ಎಂದು ಹೇಳಲು ಆಗೋದಿಲ್ಲ ಎಂದಿದ್ದಾರೆ.
ಮಾಜಿ ಸಚಿವ ನಾಗೇಂದ್ರರನ್ನಯ ಇ.ಡಿ ವಶಕ್ಕೆ ಪಡೆದಿರುವ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಮುಂದಿನ ಕಾನೂನು ಪ್ರಕ್ರಿಯೆ ಸರ್ಕಾರಕ್ಕೆ ಬಿಟ್ಟದ್ದು ಎಂದಿದ್ದಾರೆ.
ಅಪೆಕ್ಸ್ ಬಹುಕೋಟಿ ಹಗರಣದಲ್ಲಿ ರಾಜಣ್ಣ ಹೆಸರು ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ,
ಮುಂದಿನ ಕಾನೂನು ಕ್ರಮವನ್ನು ನ್ಯಾಯಲಯ ನೋಡಿಕೊಳ್ಳುತ್ತದೆ. ಜಾರಿ ನಿರ್ದೇಶನಾಲಕ್ಕೆ ಬಿಟ್ಟದ್ದು, ಸಂಬಂಧಪಟ್ಟ ಇಲಾಖೆ ಇದೆ. ಅದಕ್ಕೆ ಅಧ್ಯಕ್ಷರಿದ್ದಾರೆ ಅವರೇ ಎಲ್ಲದಕ್ಕೂ ಉತ್ತರಿಸುತ್ತಾರೆ. ನಾನು ಚಿಕ್ಕೋಡಿಯಲ್ಲಿ ಕುಳಿತು ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.