Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರ ಏನು ಕ್ರಮ ತೆಗೆದುಕೊಳ್ಳತ್ತಾರೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಏನು ಕ್ರಮ ತೆಗೆದುಕೊಳ್ಳತ್ತಾರೆ. ಅದಕ್ಕೆ ವಯಕ್ತಿಕವಾಗಿ 140 ಕೋಟಿ ಜನ ಸಂಖ್ಯೆ ಭಾರತದಲ್ಲಿರುವ ಎಲ್ಲಾ ಹಿಂದೂ, ಮುಸ್ಲಿಂ, ಸಿಕ್, ಸಾಯಿ ಅವರ ಜೊತೆಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಅವರು ಏನು ಮಾಡಿದರು ಚೆಕ್ಕಾರ ಮಾಡಲ್ಲ. ಪಾಕಿಸ್ತಾನ ಮುಗಿಸಬೇಕು, ದ್ವಂಸ ಮಾಡಬೇಕು, ಅಟ್ಯಾಕ್ ಮಾಡಬೇಕು, ನುಗ್ಗಿ ಹೊಡೆಯಬೇಕು. ಏನು ಮಾಡಿದ್ರು ಇಡೀ ಭಾರತ ದೇಶ, ರಾಜಕೀಯ ಪಕ್ಷಗಳು ಅವರ ಪರವಾಗಿವೆ. ಸಿಎಂ ಅವರು ಯಾವ ದಾಟಿಯಲ್ಲಿ ವಿಚಾರದಲ್ಲಿ ಯುದ್ಧ ಬೇಡ ಅಂದಿದ್ದಾರೆ ಅರ್ಥ ಮಾಡಕೊಬೇಕು ಅಷ್ಟೇ ಎಂದು ಲಾಡ್ ಹೇಳಿದ್ದಾರೆ.
ಪಿಯೂಷ್ ಗೊಯೆಲ್ ಹೇಳಿಕೆ ಯಾಕೆ ದೊಡ್ಡದು ಮಾಡಲಿಲ್ಲ. ಸಿಎಂ ವಿರುದ್ಧ ಮಾತನಾಡೋದು ಅವಶ್ಯಕತೆ ಇಲ್ಲ. ಆರ್ ಬಿ ತಿಮ್ಮಾಪುರ ಹೇಳಿಕೆ ಅವರಿಗೆ ಬಿಟ್ಟಿದ್ದು. ಅವರ ಹೇಳಿಕೆಗೆ ಉತ್ತರ ನೀಡೋದಿಲ್ಲಾ. ಪಾಕಿಸ್ತಾನದ ಒಳಗೆಯಾದ್ರು ಹೋಗಲಿ, ಹೊರಗಾದ್ರು ಹೊಡೆಲಿ. ಏನು ಮಾಡಬೇಕು ಮಾಡಲಿ. ನಾನು ಕೂಡ ಅಮಿತ್ ಷಾ ಅವರಿಗೆ ಹೇಳಿದ್ದೆನೆ. ಇವರು ಮಾಡಿದ್ದು ಅಪರಾಧ ಇವರನ್ನು ಸುಮ್ಮನೆ ಬಿಡಬಾರದು ಮುಗಿಸಲೇ ಬೇಕು ಅಂತ ನಾನು ಹೇಳಿದ್ದೆನೆ. ದೇಶದ ಪ್ರಧಾನಿ ತೆಗೆದುಕೊಂಡ ನಿರ್ಧಾರಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಾವೆಲ್ಲರೂ ಬದ್ಧವಾಗಿರಬೇಕು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.