Sandalwood: ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷದ ಹಿಂದೆ ತೆರೆ ಕಂಡಿದ್ದ ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ, ಬಿಗ್‌ಬಾಸ್ ಮೂಲಕ ಮತ್ತೆ ಮನೆ ಮಾತಾದರು. ಇದೀಗ ರಾಕೇಶ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೋಶ್ ಸಿನಿಮಾ ಮಾಡಿದ್ದಕ್ಕಾಗಿ, ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.
ರಾಕೇಶ್ ಮತ್ತು ಸಂಗಡಿಗರು ನಟಿಸಿದ್ದ ಜೋಶ್ ಸಿನಿಮಾ ಆದ ಬಳಿಕ, ಅವರಿಗೆ ಪೇಮೆಂಟ್ ನೀಡುವ ವಿಚಾರ ಕುರಿತು ಶಿವಮಣಿ ಸರ್, ನಮಗೆ ನಿಮ್ಮ ಬಳಿಯಿಂದ ಫ್ರೀಯಾಗಿ ಸಿನಿಮಾ ಮಾಡಿಸಿಕ“ಳ್ಳಲು ಇಷ್ಟವಿಲ್ಲ. ನೀವೆಲ್ಲ ತುಂಬಾ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದೀರಿ. ಹಾಗಾಗಿ ನಿಮಗೆ ಬೈಕ್ ಗಿಫ್ಟ್ ನೀಡುತ್ತೇನೆ. ಯಾವ ಬೈಕ್ ಬೇಕು ಕೇಳಿ ಎಂದಿದ್ದರಂತೆ.
ಆಗ ಚರ್ಚೆ ಮಾಡಿ, ಫೈನಲ್ ನಿರ್ಧಾರಕ್ಕೆ ಬಂದಿದ್ದ ರಾಕೇಶ್ ಮತ್ತು ಸ್ನೇಹಿತರು ಪಲ್ಸರ್ ಬೈಕ್ ಬೇಕೆಂದು ಕೇಳಿದ್ದರು. ಬಳಿಕ ಅವರಿಗಾಗಿ ಪಲ್ಸರ್ ಬೈಕ್, ಹೆಲ್ಮೆಟ್, ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ, ಬೈಕ್ ತಂದು ನಿಲ್ಲಿಸಲಾಗಿತ್ತು. ಬೈಕ್ ಗಿಫ್ಟ್ ಸಿಕ್ಕಿದ್ದಕ್ಕೆ, ಫುಲ್ ಟೀ ಖುಷಿಯಾಗಿತ್ತು. ಆದರೆ ನನ್ನ ಬೈಕ್‌ನ್ನು ಯಾರೋ ಕದ್ದರು ಎಂದು ರಾಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಳಿಕ ಬಂದ ಸಿನಿಮಾ ಆಫರ್‌ಗಳನ್ನು ರಾಕೇಶ್ ಓಕೆ ಎನ್ನುತ್ತಿರಲಿಲ್ಲ. ಕಥೆ ಇಷ್ಟವಾದರೆ ಮಾತ್ರ ಓಕೆ ಎನ್ನುತ್ತಿದ್ದರು. ಹೀಗಾಗಿ ಅವರಿಗೆ ಅಹಂಕಾರ ಬಂದಿದೆ ಅನ್ನೋ ಮಾತುಗಳು ಕೂ ಕೇಳಿಬಂದಿತ್ತಂತೆ. ಪೂರ್ತಿ ಸಂದರ್ಶನಕ್ಕೆ ಈ ವೀಡಿಯೋ ನೋಡಿ.