Thursday, December 12, 2024

Latest Posts

ಮೋದಿ ಆಗಮನಕ್ಕೆ ಸಕಲ ಸಿದ್ದತೆ, ದಸರಾ ಮಾದರಿ ದೀಪಾಲಂಕಾರ.!

- Advertisement -

ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಬೆಂಗಳೂರಿನ 2 ಕಡೆಗಳಲ್ಲಿ ರೋಡ್ ಶೋ, ಜೂನ್ 21 ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಜೂನ್ 20 ರಂದು ಬೆಂಗಳೂರಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಿದ್ದಾರೆ.

ಬೆಂಗಳೂರು ಉತ್ತರ ಭಾಗದ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ ನಲ್ಲಿ ರೋಡ್ ಶೋ, ದಕ್ಷಿಣ ಭಾಗದ ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಒಟ್ಟು 12 ಕಿಮೀ ರೋಡ್ ಶೋ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಯಲಹಂಕದಿಂದ ಪ್ರಧಾನಿ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು. ಸಾರ್ವಜನಿಕ ಸಭೆಗೆ 50 ರಿಂದ 60 ಸಾವಿರ ಜನರು ಸೇರುವ ಗುರಿ ಹೋಂದಿದ್ದೇವೆ. ಅಲ್ಲಿ ಜನರಿಗೆ ಸರ್ಕಾರಿಂದ ಅಗತ್ಯ ವ್ಯವಸ್ಥೆ ಆಗುತ್ತದೆ. ಆದರೆ ಜನರನ್ನು ಕರೆಸುವುದು ಪಕ್ಷದ ಮುಖಂಡರ ಜವಾಬ್ದಾರಿ, ಹೀಗಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. ಮತ್ತೆ ಎಲ್ಲಾದರು ಒಂದು ಕಡೆ ರೋಡ್ ಶೋಗೂ ಸಿದ್ಧತೆ ಆಗಬೇಕು ಎಂದು ಸೂಚಿಸಿದರು. ಜೂನ್ 18 ರ ಒಳಗೆ ಎಲ್ಲಾ ರೀತಿಯ ಸಿದ್ಧತೆ ಆಗಬೇಕು. ಪ್ರಧಾನಿಗಳ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು, ಶ್ರಮ ವಹಿಸಿ ಜನರನ್ನು ಸೇರಿಸಬೇಕು ಎಂದು ಬೆಂಗಳೂರಿನ ಸಚಿವರು, ಪಕ್ಷದ ನಾಯಕರಿಗೆ ನಿರ್ದೇಶನ ಮಾಡಿದರು.

 

- Advertisement -

Latest Posts

Don't Miss