Sunday, December 22, 2024

Latest Posts

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮನ್ ಬಂಧನ..!

- Advertisement -

www.karnatakatv.net : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮನ್ ನ್ನು ಕೌಟುಂಬಿಕ ದೌರ್ಜನ್ಯದಡಿಯಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಮಧ್ಯಮವು ವರದಿ ಮಾಡಿದೆ.

ಕ್ರಿಕೆಟ್ ದಿಗ್ಗಜ ಮೈಕಲ್ ಸ್ಲೇಟರ್ ಅವರನ್ನು ಇಂದು ಸಿಡ್ನಿಯಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ. ಅ.12ರಂದು ಈ ಘಟನೆ ನಡೆದಿದ್ದು, ಕೌಟುಂಬಿಕ ದೌರ್ಜನ್ಯ ಆರೋಪದ ವರದಿಗಳನ್ನು ನಾವು ಸ್ವೀಕರಿಸಿದ್ದೇವೆ. ಈ ಪ್ರಕರಣ ಸಂಬoಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಸಂಬoಧ ವಿಚಾರಣೆ ನಡೆಸುವ ಸಲುವಾಗಿ ಇಂದು ಮಾಜಿ ಕ್ರಿಕೆಟಿಗನ ಮನೆಗೆ ತೆರಳಿ ಮಾತನಾಡಿದ್ದೇವೆ. ಇದಾದ ಬಳಿಕ ಅವರನ್ನು ಬಂಧಿಸಿದ್ದೇವೆ,” ಎಂದು ಪೋಲಿಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈಕಲ್ ಸ್ಲೇಟರ್ ಅವರು 1993ರ ಜೂನ್ 3 ರಂದು ಇಂಗ್ಲೆoಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಹೊತ್ತಿಗೆ ಆಸ್ಟ್ರೇಲಿಯಾ ಪರ 74 ಟೆಸ್ಟ್ ಪಂದ್ಯಗಳಾಡಿದ್ದ ಮೈಕಲ್ ಸ್ಲೇಟರ್, 42.83ರ ಸರಾಸರಿಯಲ್ಲಿ 5312 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಹಾಗೂ 21 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

- Advertisement -

Latest Posts

Don't Miss