Monday, September 9, 2024

Latest Posts

‘ಅತೃಪ್ತರೇ ನಿಮ್ಮನ್ನು ಪಿಶಾಚಿಗಳಂತೆ ಕಾಡುತ್ತಾರೆ’- ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ..!

- Advertisement -

ಬೆಂಗಳೂರು: ಮೈತ್ರಿ ಶಾಸಕರನ್ನು ಸೆಳೆದು ಸರ್ಕಾರ ಪತನಗೊಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಗೆ ಅತೃಪ್ತ ಶಾಸಕರೇ ಪಿಶಾಚಿಗಳಾಗಿ ಕಾಡುತ್ತಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ಭವಿಷ್ಯ ನುಡಿದಿದ್ದಾರೆ.

ಸರ್ಕಾರ ರಚನೆಗೆ ಬಿಜೆಪಿ ವಿಶ್ವಾಸಮತ ಯಾಚನೆ ಕುರಿತಂತೆ ನಡೆಯುತ್ತಿರುವ ಸದನದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ.ಡಿ ಕುಮಾರಸ್ವಾಮಿ, ಮೊದಲಿಗೆ ಮೈತ್ರಿ ಸರ್ಕಾರ 14 ತಿಂಗಳ ಆಡಳಿತಾವಧಿಯಲ್ಲಿ ಯಾವ ಆಡಳಿತ ಯಂತ್ರ ಕುಸಿದಿತ್ತು ಅನ್ನೋ ಬಿಜೆಪಿ ಆರೋಪವನ್ನು ಅಲ್ಲಗೆಳೆದ್ರು. ಅಲ್ಲದೆ ಈ ಕುರಿತು ಮಾಹಿತಿಯನ್ನು ಸದನದ ಮುಂದೆ ಬಿಜೆಪಿ ಇಡಬೇಕು ಅಂತ ಆಗ್ರಹಿಸಿದ್ರು. ಕೇವಲ ಬಾಯಿ ಚಪಲಕ್ಕೋಸ್ಕರ ಮಾಡುವ ಆರೋಪ ಮಾಡುವುದು ನಿಮಗೆ ಶೋಭೆ ತರುವುದಿಲ್ಲ ಅಂತ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ರು.

ಬಳಿಕ ಮಾತಮಾಡಿದ ಕುಮಾರಸ್ವಾಮಿ, ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರೇ ನಿಮ್ಮನ್ನು ಪಿಶಾಚಿಗಳಂತೆ ಕಾಡುತ್ತಾರೆ. ಅಲ್ಲಿನಿಂದ ಅವರನ್ನು ಇದೀಗ ಸ್ಪೆಷಲ್ ಫ್ಲೈಟ್ ನಲ್ಲಿ ಕರೆತಂದ್ರಾ, ಅಥವಾ ಮಾಮೂಲಿ ಫ್ಲೈಟ್ ನಲ್ಲಿ ಕರೆತಂದ್ರಾ, ಅವರನ್ನು ಪಾಪ ಕೈಬಿಡಬೇಡಿ ಅಂತ ವ್ಯಂಗ್ಯವಾಡಿದ್ರು. ನೀವು ಅಧಿಕಾರ ಹಿಡಿದಿರೋದು ಕುತಂತ್ರದ ರಾಜಕಾರಣದಿಂದ. ಇನ್ನೂ ಯಾರ್ಯಾರಿಗೆ ರಾಜೀನಾಮೆ ನೀಡಲು ಕುಮ್ಮಕ್ಕು ನೀಡುತ್ತಿದ್ದೀರೋ ಅದನ್ನು ನಿಲ್ಲಿಸಿ, ಅವರನ್ನೂ ಬಿದಿಗೆ ನಿಲ್ಲಸಬೇಡಿ. ಅವರು ಸದನದಲ್ಲಿ ಇನ್ನೂ ಸ್ವಲ್ಪದಿನ ಕುಳಿತುಕೊಳ್ಳಲಿ ಅಂತ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು. ನಿಮ್ಮ ಸರ್ಕಾರ ಕೆಳಗಿಳಿಸೋದಕ್ಕೆ ನಾವು ಕುತಂತ್ರ ನಡೆಸೋದಿಲ್ಲ. ಮಹದಾಯಿ ನದಿ ನೀರು, ಕೃಷ್ಣಾ ನದಿ ಕುರಿತು ರಾಜಕೀಯ ನಡೆಸಿದ್ದೀರಿ. ವಿರೋಧ ಪಕ್ಷ ಸ್ಥಾನದಲ್ಲಿ ನಾವು ಕುಳಿತು ಕೆಲಸ ಮಾಡುತ್ತೇವೆ ಅಂತ ಸದನದಲ್ಲಿ ಕುಮಾರಸ್ವಾಮಿ ತಿಳಿಸಿದ್ರು.

- Advertisement -

Latest Posts

Don't Miss