ಬೆಂಗಳೂರು: ಮಾಜಿ ಸಿಎಂ, ಉದ್ಯಮಿ ಸಿದ್ಧಾರ್ಥ್ ಸಾವಿಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಸಿದ್ಧಾರ್ಥ್ ಸಾವು ಅನರೀಕ್ಷಿತವಾದದ್ದು, ಅವರಿಗೆ ಐಟಿ ಇಲಾಖೆ ಕಿರುಕುಳ ನೀಡಿದ್ದರ ಬಗ್ಗೆ ಆ ದೇವರೇ ನೋಡಿಕೊಳ್ಳಲಿ ಅಂತ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಸಿದ್ಧಾರ್ಥ್ ಸಾವು ನನಗೆ ಬಹಳ ನೋವು ತಂದಿದೆ. ಉದ್ಯಮಿ ಸಿದ್ಧಾರ್ಥ್ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತ ಸಿದ್ಧಾರ್ಥ್ ಕನ್ನಡಿಗರ ಆಸ್ತಿ. ಎಷ್ಟೆಲ್ಲಾ ಆಸ್ತಿ ಇದ್ದರೂ ಸರಳ ಜೀವನ ನಡೆಸುತ್ತಿದ್ದ ಅವರು ಸ್ನೇಹಜೀವಿಯಾಗಿದ್ದರು. ಇಂತಹ ಸಿದ್ಧಾರ್ಥ್ ಸಾವು ನಂಬಲು ಅಸಾಧ್ಯ ಅಂತ ಡಿಕೆಶಿ ಸಂತಾಪ ಸೂಚಿಸಿದ್ರು.
ಇನ್ನು ಐಟಿ ಕಿರುಕುಳ ವಿಚಾರವಾಗಿ ಸಿದ್ಧಾರ್ಥ್ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಉಲ್ಲೇಖಿತವಾಗಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ಬೇರೆಯವರು ಆತುರದಿಂದ ಹೇಳಿಕೆ ನೀಡುತ್ತಿದ್ದಾರೆ, ಆದರೆ ನಾನು ಈ ಬಗ್ಗೆ ಏನೂ ಹೇಳೋದಿಲ್ಲ. ಎಲ್ಲಾ ಆ ಭಗವಂತನೇ ನೋಡಿಕೊಳ್ಳಲಿ ಅಂತ ಡಿಕೆಶಿ ಇದೇ ವೇಳೆ ಹೇಳಿದ್ರು.