Tuesday, December 3, 2024

Latest Posts

ಮಾಜಿ ಸಂಸದ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ: ಪ್ರಜ್ವಲ್ ರೇವಣ್ಣಗೆ ಜೈಲೇ ಗತಿ

- Advertisement -

Political News: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದು, ಇಂದು ಕೋರ್ಟ್ ವಿಚಾರಣೆ ನಡೆಸಿತ್ತು. ಆದರೆ ಜಾಮೀನಿಗಾಗಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಜಾಗೊಂಡು, ಪ್ರಜ್ವಲ್ ಜೈಲುವಾಸ ಮುಂದುವರಿಯಲಿದೆ ಎಂದು ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಪ್ರಜ್ವಲ್‌ಗೆ ಸದ್ಯ ಜೈಲೇ ಗತಿಯಾಗಿದೆ.

ಚುನಾವಣೆ ಸಮೀಪ ಇದ್ದ ಕಾರಣ, ಹೆಸರು ಹಾಳು ಮಾಡಲು, ಪ್ರಯತ್ನಿಸಲಾಗಿತ್ತು ಎಂದು ಪ್ರಜ್ವಲ್ ರೇವಣ್ಣ ಪರ ವಕೀಲರು ವಾದ ಮಾಡಿದ್ದರು. ಆದರೆ ವ್ಯಕ್ತಿ ಪ್ರಭಾವಿ ರಾಜಕಾರಣಿಯಾಗಿದ್ದಾನೆಂದು ಕಾರಣ ನೀಡಿ, ಕೋರ್ಟ್ ಅರ್ಜಿ ವಜಾಗೊಳಿಸಿದೆ. ಇನ್ನು 6 ತಿಂಗಳು ಬಿಟ್ಟು ಮತ್ತೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಕಳೆದ ಚುನಾವಣೆ ಮುಗಿದ ಮರರುದಿನವೇ, ಪ್ರಜ್ವಲ್ ರೇವಣ್ಣದು ಎನ್ನಲಾದ ಅಶ್ಲೀಲ ವೀಡಿಯೋ ಹರಿದಾಡಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಪ್ರಜ್ವಲ್ ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದರು. ಹಲವು ಬಾರಿ ಟಿಕೇಟ್ ಬುಕ್‌ ಮಾಡಿ, ಕ್ಯಾನ್ಸಲ್ ಮಾಡಿದ್ದರು. ಕೊನೆಗೆ ಹೆಚ್.ಡಿ.ದೇವೇಗೌಡರು ವಾರ್ನ್ ಮಾಡಿದ ಬಳಿಕ ರೇವಣ್ಣ ಭಾರತಕ್ಕೆ ಬಂದು, ಪೊಲೀಸರಿಗೆ ಸರೆಂಡರ್ ಆಗಿದ್ದರು.

- Advertisement -

Latest Posts

Don't Miss