Friday, December 13, 2024

Latest Posts

ಸಚಿವ ಸಂಪುಟ ಉಪ ಸಮಿತಿ ಮುಂದೆ ಕೋವೀಡ್ ವರದಿ: ಕಾನೂನು ಸಚಿವ ಎಚ್.ಕೆ.ಪಾಟೀಲ್

- Advertisement -

Hubli News: ಹುಬ್ಬಳ್ಳಿ; ಕೋವೀಡ್ ಹಗರಣ ಕುರಿತು ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಕುನ್ನಾ ನೇತೃತ್ವದಲ್ಲಿ ವರದಿ ನೀಡಿದ್ದು ಅದರ ಸಂಪೂರ್ಣ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಈಗಾಗಲೇ ಕೋವೀಡ್ ಸಂದರ್ಭದಲ್ಲಿ ಆದ ಹಗರಣ ಮಯ ಭ್ರಷ್ಟಾಚಾರ ಕುರಿತು ಹಣಕಾಸು ಇಲಾಖೆಯಿಂದ ಮಹತ್ವದ ಮಾಹಿತಿ ಸಹ ಪಡೆಯಲಾಗಿದೆ. ಇದೊಂದು ದೊಡ್ಡ ಪ್ರಮಾಣದ ಹಗರಣ ಆಗಿದೆ.‌ ಮುಂದೆ ಸಚಿವ ಸಂಪುಟದ ಉಪ ಸಮಿತಿಯ ಮುಂದೆ ಬಂದು ಅದು ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದರ ಮೇಲೆ‌ ಎಲ್ಲ ಅವಲಂಬಿನೆ ಇದೆ ಎಂದರು.

- Advertisement -

Latest Posts

Don't Miss