ಕರ್ನಾಟಕದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಗ್ಗೆ ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್ ಶಾ ಧ್ವನಿ ಎತ್ತಿದ್ದಾರೆ. ಲಿಖಿತ ರೂಪದಲ್ಲಿ ಸಂಘಗಳ ಸ್ಥಿತಿಗತಿಗಳ ಮತ್ತು ಬಹಳಷ್ಡು ಸಂಘಗಳು ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ 6,291 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿದ್ದು, ಅವುಗಳನ್ನು ಮುಚ್ಚುವ ಪ್ರಕ್ರಿಯೆ ನಡೆದಿದೆ ಎಂದು ಅಮಿತ್ ಶಾ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮುಚ್ಚುವ ಪ್ರಕ್ರಿಯೆಯಲ್ಲಿರುವ 125 ಸಹಕಾರ ಸಂಘಗಳ ಪೈಕಿ 28 ಸಂಘಗಳು ಚಿಕ್ಕಬಳ್ಳಾಪುರ, 13 ಸಂಘಗಳು ಹಾಸನದಲ್ಲಿ, 12 ಸಂಘಗಳು ಬೆಳಗಾವಿಯಲ್ಲಿ ಇವೆ. ಇನ್ನು 6,291 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 644 ಸಂಘಗಳು ಈಗ ಕಾರ್ಯಚರಿಸುತ್ತಿಲ್ಲ ಎಂಬ ವರದಿಯನ್ನು ಅಮಿತ್ ಶಾ ಹೇಳಿದ್ದಾರೆ.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 428 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೋಂದಣಿ ಆಗಿದೆ. ಈ ಪೈಕಿ 187 ಸಂಘಗಳು ಬೆಳಗಾವಿಯಲ್ಲಿ ನೋಂದಣೀ ಆಗಿವೆ ಎಂದು ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ