- Advertisement -
www.karnatakatv.net ಕೇರಳ: ರಾಜ್ಯದ ಪ್ರಸಿದ್ಧ ಆಯುರ್ವೇದ ಡಾಕ್ಟರ್ ಡಾ. ಪಿ.ಕೆ ವಾರಿಯರ್ ವಿಧಿವಶರಾಗಿದ್ದಾರೆ. ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ನೂರನೆ ವಯಸ್ಸಿನಲ್ಲಿ ದೈವಾಧೀನರಾದರೆಂದು ಕುಟುಂಬ ಸ್ಪಷ್ಟ ಪಡಿಸಿದೆ. ನಂಬೂದರಿ ಹಾಗೂ ಪಣ್ಣಿಯಂಪಿಲ್ಲಿ ವರಿಸಾಯರಿ ಅವರ ಪುತ್ರರಾಗಿ ಜೂನ್ 5, 1921ರಲ್ಲಿ ಜನಿಸಿದ್ದರು. ಶ್ರೀಯುತರು 1999ರಲ್ಲಿ ಪದ್ಮ ಶ್ರೀ ಹಾಗೂ 2010ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಸಾವಿಗೆ ಕುಟುಂಬ ಹಾಗೂ ಕೆಎಎಸ್ ಶಿಷ್ಯ ವೃಂದ ಕಂಬನಿ ಮಿಡಿದಿದೆ.
- Advertisement -