Wednesday, June 18, 2025

Latest Posts

ಅಪ್ಪು ಅಗಲಿಕೆಯ ಸುದ್ದಿ ಕೇಳಿ ಅಭಿಮಾನಿ ನೇಣಿಗೆ ಶರಣು..!

- Advertisement -

www.karnatakatv.net: ಬೆಳಗಾವಿ : ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯ ಸುದ್ದಿ ಕೇಳಿ ರಾಜ್ಯಾದ್ಯಂತ ಮೌನಆವರಿಸಿದೆ. ನಿನ್ನೆ ದಿನ ಅಭಿಮಾನಿಗಳಿಗೆ ಕರಾಳ ದಿನವಾಗಿದೆ. ಅಪ್ಪು ಅಗಲಿಕೆಯ ಸುದ್ದಿ ಕೇಳಿ ಅಭಿಮಾನಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ವಡ್ಡರಗಲ್ಲಿಯ ಯುವಕನೊಬ್ಬ ಪುನೀತ್ ಸಾವಿನಿಂದ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಹುಲ ಗಾಡಿವಡ್ಡರ (22) ಮೃತ ಅಭಿಮಾನಿ, ಪುನೀತ್ ಅಪ್ಪಟ್ಟ ಅಭಿಮಾನಿಯಾಗಿದ್ದ ರಾಹುಲ್ ಅವರ ಅಗಲಿಕೆಯ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಮನನೊಂದು ಮನೆಯಲ್ಲಿನ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ, ನಿನ್ನೆ ಸಾಯಂಕಾಲ ಪವರ್ ಸ್ಟಾರ್ ಪುನೀತ್ ಗೆ ಗೆಳೆಯರೊಂದಿಗೆ ಶೃದ್ದಾಂಜಲಿ ಸಲ್ಲಿಸಿ ಮನೆಗೆ ಬಂದಿದ್ದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss