- Advertisement -
www.karnatakatv.net: ರಾಯಚೂರು : ಜಿಲ್ಲೆಯ ಸಿರವಾರ ತಾಲ್ಲೂಕಿನ ಯರಮರಸ್ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಗೊಬ್ಬರದ ಚೀಲ ತೊಳೆಯಲು ಹೋಗಿದ್ದ ವ್ಯಕ್ತಿ ನೀರು ಪಾಲಾಗಿದ್ದಾನೆ.
ರೈತ ಬಸವರಾಜ್ ಪಾಟೀಲ್ ಕೂರನೂರು (53) ಚೀಲವನ್ನು ತೊಳೆಯಲೆಂದು ಹೋಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಹರಿದುಕೊಂಡು ಹೋಗಿದ್ದಾನೆ. ಇತನ ಹುಡುಕಾಟಕ್ಕಾಗಿ ನಾಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯನ್ನು ನಡೆಸಿದೆ. 4 ಗಂಟೆಗಳ ಕಾಲ ಹುಡುಕಾಟ ನಡೆಸಿದ್ರೂ ರೈತನ ಮೃತದೇಹ ಪತ್ತೆಯಾಗಿಲ್ಲ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -