Friday, April 18, 2025

Latest Posts

Farmer : ಅನ್ನ ಹಾಕುವ ಕೈಯಲ್ಲಿಗ ನೇಣಿನ ಹಗ್ಗ: ಹೆಚ್ಚಿದ ರೈತರ ಆತ್ಮಹತ್ಯೆಯ ಪ್ರಕರಣಗಳು..!

- Advertisement -

Hubballi News : ಅವರೆಲ್ಲರೂ ದೇಶಕ್ಕೆ ಅನ್ನಹಾಕುವ ಅನ್ನದಾತರು. ಆದರೆ ಈ ಅನ್ನದಾತನ ಕಷ್ಟಕ್ಕೆ ಮಾತ್ರ ಕೊನೆಯೇ ಇಲ್ಲವಾಗಿದೆ. ಆದ್ದರಿಂದ ಕುಣಿಕೆಗೆ ಕೊರಳೊಡ್ಡುವ ನಿರ್ಧಾರಕ್ಕೆ ರೈತ ಬಂದಿದ್ದಾನೆ. ಅದರಲ್ಲೂ ಕಳೆದ ಆರು ತಿಂಗಳಲ್ಲಿಯೇ ನೂರಾರು ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..

ಸರಿಯಾದ ಸಮಯಕ್ಕೆ ಬಾರದ ಮಳೆ. ಮಳೆಯ ಸಮಸ್ಯೆಯಿಂದ ಬಾರದ ಬೆಳೆ. ಶ್ರಮದ ಹನಿ ಬಿದ್ದರೂ‌ ಮೇಲೆ ಎಳದೆ ನೆಲದಲ್ಲಿಯೇ ಉಳಿದ ಇಳೆ. ಇದೆಲ್ಲದರ ನಡುವೆಯೂ ರೈತ ಸಮುದಾಯ ಸಂಕಷ್ಟದ ಬದುಕನ್ನು ನೂಕುತ್ತಿದ್ದಾನೆ. ಕಳೆದ ಆರು ತಿಂಗಳಲ್ಲಿಯೇ ರಾಜ್ಯದಲ್ಲಿ 250ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ 38 ರೈತರು ಅಂದರೆ ರೈತರ ಆತ್ಮಹತ್ಯೆಯ ಪಟ್ಟಿಯಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿದೆ. ಅಲ್ಲದೇ ಧಾರವಾಡ ಜಿಲ್ಲೆಯಲ್ಲಿಯೂ ಬಹುತೇಕ ರೈತರು ಸಾಲಭಾದೆ ತಾಳದೇ ಆತ್ಮಹತ್ಯೆ ಮಾಡಿಕೊಂಡಿರುವುದು ಒಂದುಕಡೆಯಾದರೇ ಮತ್ತೊಂದು ಕಡೆಯಲ್ಲಿ ಕೃಷಿಯಲ್ಲಿನ ಸಮಸ್ಯೆಗಳಿಂದ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ಸರಿಯಾಗಿ ಸಿಗದ ಬೆಂಬಲ ಬೆಲೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣವೆ ಹೆಚ್ಚುತ್ತಿದೆ. ವಿನಃ ಸಾಲಮುಕ್ತವಾಗಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತ ಸಮುದಾಯ ಕುಣಿಕೆಗೆ ಕೊರಳೊಡ್ಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅಲ್ಲದೇ ದಿನವಿಡೀ, ವರ್ಷವಿಡೀ ಹೊಲದಲ್ಲಿ ಉಳುಮೆ ಮಾಡಿದರೂ ಕೂಡ ಸರಿಯಾದ ಬೆಂಬಲ ಬೆಲೆ ರೈತ ಸಮುದಾಯಕ್ಕೆ ಸಿಗದೇ ಇರುವುದರಿಂದ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಅನ್ನದಾತನ ಆತ್ಮದ ನೋವನ್ನು ಸರ್ಕಾರ ಆಲಿಸುವ ಕಾರ್ಯವನ್ನು ಮಾಡಬೇಕಿದೆ. ರೈತ ಸಮುದಾಯಕ್ಕೆ ಧೈರ್ಯ ತುಂಬುವುದರ ಜೊತೆಗೆ ಅಸಹಾಯಕ ಸ್ಥಿತಿಯಲ್ಲಿರುವ ರೈತನಿಗೆ ಸಹಾಯಹಸ್ತ ಒದಗಿಸುವ ಕಾರ್ಯವನ್ನು ಮಾಡಬೇಕಿದೆ.

Rishi Munis : ಹಾಸನ : ಋಷಿ ಮುನಿಗಳು ಉಪಯೋಗಿಸುವ ವಸ್ತುಗಳು ಪತ್ತೆ ..!

ಹಾಸನದಲ್ಲಿ ಆಪರೇಷನ್ ಹಸ್ತ: ಕಾಂಗ್ರೆಸ್‌ಗೆ ಬಂದ 20ಕ್ಕೂ ಹೆಚ್ಚು ಜೆಡಿಎಸ್ ಮುಸ್ಲೀಂ ಮುಖಂಡರು..

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು

- Advertisement -

Latest Posts

Don't Miss