Hubli News: ಹುಬ್ಬಳ್ಳಿ: ಏಷ್ಯಾದ ಅತೀ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಹುಬ್ಬಳ್ಳಿಯಲ್ಲಿ ಇದೆ. ಆದರೆ ಇದರಿಂದ ಹುಬ್ಬಳ್ಳಿ ರೈತರಿಗೂ ಏನೂ ಪ್ರಯೋಜನ ಇಲ್ಲ ಅನ್ನೋದು ಮಾತ್ರ ವಿಪರ್ಯಾಸದ ಸಂಗತಿ.
ಹೌದು, ಈ ಕೃಷಿ ಮಾರುಕಟ್ಟೆಗೆ ಪ್ರತಿದಿನ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬರುತ್ತಾರೆ. ನೋಡುವುದಕ್ಕೆ ಇದು ದೊಡ್ಡ ಕೃಷಿ ಮಾರುಕಟ್ಟೆ ಆದರೂ ಕೂಡ, ಇಲ್ಲಿ ಬರುವ ರೈತರಿಗೆ ಯಾವುದೇ ಮೂಲಭೂತ ಸೌಕರ್ಯ ಸಿಗುತ್ತಿಲ್ಲ.
ಈ ಕೃಷಿ ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೈತರು ಎಪಿಎಂಸಿಗೆ ಆಗಮಿಸುತ್ತಾರೆ. ಆದರೆ ಇದು ಹೆಸರಿಗಷ್ಟೇ ರೈತ ಭವನವಾಗಿದ್ದು, ಎಪಿಎಂಸಿ ಈ ಕೃಷಿ ಮಾರುಕಟ್ಟೆಯಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಶೌಚಾಲಯ ವ್ಯವಸ್ಥೆಯಾಗಲಿ, ವಸತಿ ವ್ಯವಸ್ಥೆಯಾಗಲಿ ನೀಡಿಲ್ಲ. ಹಾಗಾಗಿ ಇಲ್ಲಿ ಬರುವ ರೈತರು ಈ ಸೌಲಭ್ಯಕ್ಕಾಗಿ, ತಮ್ಮ ಹಣ ಖರ್ಚು ಮಾಡಬೇಕಿದೆ.
ಆದರೆ ಇವರಿಗೆ ಬೇರೆ ದಾರಿ ಇಲ್ಲದಂತಾಗಿದ್ದು, ತಾವು ಬೆಳೆದ ಬೆಳೆ ಮಾರಟಕ್ಕಾಗಿ ಪ್ರತಿ ನಿತ್ಯ ಈ ಸ್ಥಳಕ್ಕೆ ಬರಲೇಬೇಕಿದೆ. ರೈತರಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ರೈತ ಭವನ ನಿರ್ಮಾಣ ಮಾಡಿಯೂ ಉಪಯೋಗವಾಗದಂತಾಗಿದ್ದು, ರೈತರ ಪಾಡು ದೇವರಿಗೇ ಪ್ರಿಯವಾಗಿದೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿದರೆ, ಉತ್ತಮ.