ಬೆಂಗಳೂರು: ಕೆಎಂಎಫ್ ಹಾಲಿನ ದರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ನಿನ್ನೆ ಸಭೆ ನಡೆಸಿ ಕೆಎಂಎಫ್ಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಗ್ರಾಹಕರಿಗೆ ಹಾಲಿನ ದರ ಹೊರೆಯಾಗದಂತೆ ಮತ್ತು ರೈತರಿಗೆ ಅನ್ಯಾಯವಾಗದಂತೆ ಹಾಲಿನ ದರ ನಿಗದಿ ಮಾಡಲು ಸಿಎಂ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಗ್ರಾಹಕರಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಎರಡು ದಿನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಕೆಎಂಎಫ್ಗೆ ತಿಳಿಸೆದ್ದೇವೆ. ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡುವುದು ಬೇಡ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಒಳನುಗ್ಗಲು ಪ್ರಯತ್ನಿಸಿದ ಪಾಕಿಸ್ತಾನಿಯ ಹತ್ಯೆ
ರೈತರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಮಾಡಲು ಮತ್ತು ಕೆಎಂಎಫ್ನಲ್ಲಿ ಆಗುತ್ತಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಲಹೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೆಎಂಎಫ್ ಸಹ ಸರ್ಕಾರದ ಒಂದು ಅಂಗವಾಗಿದೆ. ರೈತರ ಮತ್ತು ಗ್ರಾಹಕರ ಹಿತಚಿಂತನೆ ಮಾಡುವದು ಸರ್ಕಾರದ ಕರ್ತವ್ಯವಾಗಿದ್ದು, ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸ್ಪರ್ಧೆಯಲ್ಲಿರುವುದರಿಂದ ಹಾಲಿನ ದರ ಕಾಲಕಾಲಕ್ಕೆ ಬದಲಾವಣೆಯಾಗುತ್ತದೆ. ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾಣ ಕೈಗೊಳ್ಳಲು ಕೆಎಂಎಫ್ಗೆ ತಿಳಿಸಿರುವುದಾಗಿ ಸಿಎಂ ಹೇಳಿದರು.
ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!
ನಿಮ್ಮ ಮನೆ ಪ್ರಶಾಂತವಾಗಿರಲು ಭಾವಿಸುತ್ತಿದ್ದೀರಾ..? ಆದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ!