Tuesday, October 14, 2025

Latest Posts

ನೀರಿಗಾಗಿ ರೈತರ ಪರದಾಟ

- Advertisement -

www.karnatakatv.net : ರಾಯಚೂರು : ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ತಲುಪದೆ ರೈತರು ಅಲೆದಾಡುವಂತಾಗಿದೆ. ಕಾಲುವೆಗೆ ಸಮರ್ಪಕ ನೀರು‌ಹರಿಸುವಲ್ಲಿ‌ ನೀರಾವರಿ ಅಧಿಕಾರಿಗಳು‌ ವಿಫಲರಾಗಿದ್ದು, ನೀರು‌‌ ಹರಿಸುವಂತೆ ಜನಪ್ರತಿನಿಧಿಗಳೊಂದಿಗೆ ರೈತರು‌ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಸಿರವಾರದಿಂದ ನೂರಾರು ರೈತರು ಜಿಲ್ಲಾಧಿಕಾರಿಗೆ ಕಚೇರಿಗೆ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ‌ ಎನ್ ಎಸ್ ಬೋಸರಾಜ ನೇತೃತ್ವದಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಡಾ.ಸತೀಶ್ ಅವರೊಂದಿಗೆ ಚರ್ಚೆ ನಡೆಸಿದರು.  ಅಚ್ಚುಕಟ್ಟು ಪ್ರದೇಶದ ಕಾಲುವೆ  104 ನೇ ಮೈಲ್ನಲ್ಲಿ‌ ಸುಮಾರು 300 ಕ್ಯೂಸೆಕ್ ನೀರು‌ ಹರಿಸಬೇಕಿದೆ. ಆದರೆ ಕೇವಲ‌ 15 ಕ್ಯೂಸೆಕ್ ನೀರಿದ್ದು, ಭತ್ತ ನಾಟಿ ಮಾಡಿದ ರೈತರು ಕಣ್ಣೀರಿಡುವಂತಾಗಿದೆ. ನೂರಾರು ಎಕರೆಯಲ್ಲಿ ನಾಟಿ ಮಾಡಿದ ಭತ್ತ ನೀರಿಲ್ಲದೆ ಬಾಡುತ್ತಿವೆ. ಸಾಲಸೋಲ ಮಾಡಿ ಭತ್ತ ನಾಟಿ ಮಾಡಲಾಗಿದ್ದು, ನೀರಾವರಿ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಬೆಳೆ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗೇಜ್ ಮೆಂಟೆನನ್ಸ್ ಮಾಡಿ ಬೆಳೆ ಉಳಿಸಿ ರೈತರನ್ನ‌ ಕಾಪಾಡುವಂತೆ ರೈತರು ಆಗ್ರಹಿಸಿದರು.

ಅನಿಲ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss