Thursday, August 7, 2025

Latest Posts

ಬೆಳಿಗ್ಗೆ 4 ಗಂಟೆಯಿಂದ ಕಾದರೂ ಒಬ್ಬರಿಗೆ ಒಂದೇ ಚೀಲ ಯೂರಿಯಾ ಗೊಬ್ಬರ, ರೈತರ ಪರದಾಟ

- Advertisement -

Gadag News: ಗದಗ: ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಕಾದು ನಿಲ್ಲುವ ಗೋಳಾಟ ಇನ್ನೂ ಹಾಗೇ ಮುಂದುವರೆದಿದೆ. ರೈತರು ಬೆಳಿಗ್ಗೆ 4 ಗಂಟೆಯಿಂದ ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಹಾಗೇ ಇದೆ.

ಗದಗ ನಗರದ ನಾಮಜೋಶಿ ರಸ್ತೆಯಲ್ಲಿ ಆಗ್ರೋ ಏಜನ್ಸಿಯಲ್ಲಿ ಗೊಬ್ಬರಕ್ಕಾಗಿ ಜನ, ಮಕ್ಕಳ ಜತೆ ಕ್ಯೂನಲ್ಲಿ ನಿಂತಿದ್ದಾರೆ. ಗೊಬ್ಬರ ಬೇಕಾದವರು, ಆಧಾರ್ ಕಾರ್ಡ್ ಹಿಡಿದು ಸರತಿ ಸಾಲಿನಲ್ಲಿ ನಿಂತರೂ, ಅಂಗಡಿಯವರು ಅವರಿಗೆ ಬರೀ 1 ಚೀಲ ಗೊಬ್ಬರ ಮಾತ್ರ ನೀಡುತ್ತಿದ್ದಾರೆ. ಆದರೆ ರೈತರಿಗೆ ಹೆಚ್ಚು ಯೂರಿಯಾ ಗೊಬ್ಬರದ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಬೆಳೆಗಳು ಸರಿಯಾಗಿ ಬೆಳೆಯುವುದಿಲ್ಲ. ಹಾಗಾಗಿ ಔಷಧ ಹಾಕುವುದು ಅನಿವಾರ್ಯವಾಗಿದೆ. ಆದರೆ ರೈತರಿಗೆ ಗೊಬ್ಬರ ಸರಿಯಾಗಿ ಸಿಗದಾಗಿದ್ದು, ಬೆಳೆದು ನಿಂತ ಬೆಳೆಗೆ ಯೂರಿಯಾ ಪೂರೈಸಿ ಅಂತಾ ಮನವಿ ಮಾಡಿದ್ದಾರೆ.

ಇನ್ನು ಗದಗ ತಾಲೂಕಿನ ಪಾಪನಾಶಿ, ಅಸುಂಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ಆಗಮಿಸಿದ್ದು, ಆಗ್ರೋ ಏಜನ್ಸಿಗಳು ರೈತರಿಗೆ ಪೋಲೀಸ್ ಬಂದೋಬಸ್ತ್‌ನಲ್ಲಿ ಟೋಕನ್ ವಿತರಿಸುತ್ತಿದೆ.

- Advertisement -

Latest Posts

Don't Miss