ರಾಜ್ಯ ಸುದ್ದಿ; ಅಕ್ಟೋಬರ್ ತಿಂಗಳು ಚಳಿಗಾಲದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಶೇ 10 ರಷ್ಟು ಏರಿಕೆಯಾಗಲಿದ್ದು ರೈತರು ಬೆಳೆದ ಬೆಳೆಯ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ ಕರ್ನಾಟಕದ ಬಹುತೇಕ ಭಾಗಗಳು ಈ ತಿಂಗಳಲ್ಲಿ ಹೆಚ್ಚಿನ ತಾಪಮಾನ ಇರಲಿದೆ ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಲಿದ್ದಾರೆ. ಕರ್ನಾಟಕದಲ್ಲಿ ಕೃಷಿ ಭೂಮಿಯು ತನ್ನ ತೇವಾಂಶವನ್ನು ಕಳೆದುಕೊಳ್ಳಲಿದ್ದು ಬೆಳಗಳು ಅಪಾಯದಲ್ಲಿವೆ ಎಂದು ತಿಳಿಸಿದರು.
ತಾಪಮಾನದಲ್ಲಿ ಏರಿಕೆಯಾಗಿ ಮಣ್ಣಿನ ತೇವಾಂಶ ಕಳೆದುಕೊಳ್ಳುವುದರಿಂದ ಇಳುವರಿ ಕಡೆಮೆ ಬರುವ ಲಕ್ಷಣಗಳು ಕಾಣುತ್ತಿವೆ ಹಾಗಾಗಿ ಉತ್ಪಾದೆನೆಯಲ್ಲಿ ಶೇ 10 ರಷ್ಟು ಕುಸಿತ ಕಾಣಲಿದೆ ಎಂದು ಕೃಷಿ ಇಲಾಖೆಯ ಆಯುಕ್ತ ವೈ ಎಸ್ ಪಾಟೀಲ್ ತಿಳಿಸಿದರು.
ಆದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈಶಾನ್ಯ ಮಾನ್ಸೂನ್ ಗಾಳಿ ಬೀಸುವುದರಿಂದ ದಕ್ಷಿಣ ಜಿಲ್ಲೆಗಳಿಗೆ ಕಡಿಮೆ ಪ್ರಮಾಣದ ಶಾಖ ಇರಲಿದೆ. ಹಾಗೂ ಏಕದಳ ಮತ್ತು ಬೇಳೆಕಾಳು ಬೆಳೆಯುವ ಪ್ರದೇಶಗಳಾಧ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಗಳಲ್ಲಿ ಪ್ರಸ್ತುತ ಹವಾಮಾನ ಪರಿಸ್ಥಿತಿಯಿಂದಾಗಿ ಬೆಳೆಗಳ ಮೇಲೆ ಹೆಚ್ಚಿನ ಪರಿಣಾಮ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
court judjement ರಾಜ್ಯದ ಜನರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ನ್ಯಾಯಾಲಯದ ಆದೇಶ..!
K.N Rajanna: ಅನಾರೋಗ್ಯದ ಕಾರಣ ಜಿಲ್ಲೆಗೆ ಭೇಟಿ ನೀಡಲು ಆಗಿರಲಿಲ್ಲ..!
friend ship: ಪ್ರೇಮಿಗಳಿಗೆ ಸಹಾಯಮಾಡಿದ ಸ್ನೇಹಿತ ; ಆದರೆ ನಂತರ ನಡೆದಿದ್ದೇ ಬೇರೆ..!