ಸೊಂಟ ಪೂಜಾ ಹೆಗ್ಡೆ ಥರ ರ‍್ಬೇಕು, ಫಿಗರ್ ತಮನ್ನಾ ಥರ ರ‍್ಬೇಕು ಅನ್ನೋದು ಬಹುತೇಕ ಹೆಣ್ಮಕ್ಕಳ ಕನಸು. ಅದಕ್ಕಾಗಿ ಶಾರ್ಟ್ ಕಟ್ ಹುಡ್ಕೋಕೆ ಹೋಗಿ ಇಲ್ಲೊಬ್ಬ ಸುಂದರಿ ಲೈಫ್‌ಗೇ ಕುತ್ತು ತಂದುಕೊAಡಿದ್ದಾರೆ. ಫ್ಯಾಟ್ ಸರ್ಜರಿ ಮಾಡಿಸೋಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಹೆಣ್ಣುಮಗಳ ಕುಟುಂಬ ಈಗ ಭರಿಸಲಾರದ ನೋವಲ್ಲಿದೆ. ಹೊಟ್ಟೇಲಿ ಫ್ಯಾಟ್ ಇದೆ ಸರ್ಜರಿ ಮಾಡುಸ್ಕೋ ಅಂತ ಸ್ನೇಹಿತರು ಹೇಳಿದ್ದನ್ನು ಕೇಳಿ ಮನೆಯವರ ಮಾತನ್ನೂ ಕೇಳದೇ ಯಾರಿಗೂ ಹೇಳದೇ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸ್ಕೊಂಡ್ರು ಚೇತನಾರಾಜ್.
ದೊರೆಸಾನಿ, ಗೀತಾ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ನಟಿಸಿದ್ದ ಚೇತನಾರಾಜ್ ಮನೆಯವರ ಮಾತೂ ಕೇಳದೇ ನಾನು ನಟಿಯಾಗ್ತೀನಿ, ಸಾಧಿಸ್ತೀನಿ ಅಂತ ಹೊರಟಿದ್ರು. ಅದಕ್ಕಾಗಿ ಒಂದಷ್ಟು ಅವಕಾಶಗಳೂ ಸಿಕ್ಕಿ ನಟನೆಯಲ್ಲಿ ಬೆಳೀತಾ ಇರೋವಾಗ ಸ್ನೇಹಿತರ ಮಾತು ಕೇಳಿ ಬಳುಕೋ ಬಳ್ಳಿಯಾಗೋ ಕನಸು ಕಂಡು ಹೊಟ್ಟೆಯ ಭಾಗದ ಬೊಜ್ಜು ಕರಗಿಸೋಕೆ ಸರ್ಜರಿ ಮಾಡಿಸಬೇಕು ಅಂತ ನಿರ್ಧರಿಸಿದ ಚೇತನಾರಾಜ್ ಈಗ ಅದರಿಂದಾದ ಅಡ್ಡ ಪರಿಣಾಮಗಳಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಹಿAದೊಮ್ಮೆ ಈ ರೀತಿ ಅಡ್ಡಪರಿಣಾಮಗಳಾಗಿದ್ದನ್ನು ನಟಿ ನೀತೂ ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಂಡಿದ್ರು. ಟ್ಯಾಲೆಂಟ್ ಇದ್ರೆ ಅವಕಾಶಗಳು ಸಿಕ್ತವೆ. ಒಳ್ಳೆಯ ಜೀವನಕ್ರಮ ಆಹಾರ ಪದ್ಧತಿ ಇದ್ರೆ ಹೆಲ್ದೀಯಾಗಿರಬಹುದು. ಎಲ್ಲರೂ ಪೂಜಾ ಹೆಗ್ಡೆ ಆಗೋಕೆ ಶಾರ್ಟ್ಕಟ್‌ನಲ್ಲಿ ಹೋದ್ರೆ ಹಿಂಗೇ ಆಗೋದು. ತೆಳ್ಳಗಾಗೋಕೆ ಏನೇನೋ ಸಪ್ಲಿಮೆಂಟ್ಸ್ ತೊಗೊಳೋದು ಪ್ರಾಣಾನೇ ತೊಗೋಬಹುದು ಹುಷಾರ್..!
ಸುಂದರಿ ಪ್ರಾಣಾನೇ ತೆಗೀತು ಸ್ಲಿಮ್ಮಿಂಗ್ ಸರ್ಜರಿ..!
- Advertisement -
- Advertisement -