ಜ್ಯೂಸ್‌ನಲ್ಲಿ ಮೂತ್ರ ಬೆರೆಸಿ ಮಾರಾಟ ಮಾಡುತ್ತಿದ್ದ ಅಪ್ಪ- ಮಗನ ಬಂಧನ

Uttar Pradesh News: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತರಕಾರಿ, ಹಣ್ಣುಗಳ ಮೇಲೆ ಉಗಿಯುವುದು, ಹೊಟೇಲ್‌ನಲ್ಲಿ ತಿಂಡಿಗಳ ಮೇಲೆ ಉಗಿಯುವುದು, ಮೂತ್ರ ಬೆರೆಸಿದ ಆಹಾರವನ್ನು ಮಾರಾಟ ಮಾಡುವುದೆಲ್ಲ ನೋಡಿರುತ್ತೇವೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಮೂತ್ರ ಬೆರೆಸಿ, ಜ್ಯೂಸ್ ತಯಾರು ಮಾಾಡಿ, ಮಾರಾಟ ಮಾಡಿದವನನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದಲ್ಲಿ ನಡೆದ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಪ್ರತ್ಯಕ್ಷವಾಗಿ ನೋಡಿರುವ ಜನ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ,ಆರೋಪಿಯಾಗಿರುವ ಅಮೀರ್‌ನನ್ನು ಹಿಗ್ಗಾಮುಗ್ಗಾ ಥಳಿಸಿ, ಅಂಗಡಿಯನ್ನು ಧ್ವಂಸ ಮಾಡಿದ್ದಾರೆ.

ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಮತ್ತು ಆತನ 15 ವರ್ಷದ ಮಗುವನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ, ಮೂತ್ರ ತುಂಬಿರುವ ಬಾಟಲಿ ಕೂಡ ಕಾಣಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ, ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

About The Author