- Advertisement -
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ವೋಲ್ವೋ ಬಸ್ ಬೆಂಕಿಗಾಹುತಿಯಾದ ದುರಂತದಲ್ಲಿ, ಒಬ್ಬ ತಂದೆಯ ಧೈರ್ಯದಿಂದ 19 ಜೀವಗಳು ಉಳಿದಿವೆ. ಕೇವಲ ಎರಡು ತಿಂಗಳ ಮಗುವಿನ ತಂದೆಯಾಗಿರುವ ಈ ವ್ಯಕ್ತಿ ಆತಂಕದ ಕ್ಷಣದಲ್ಲಿ ತೋರಿದ ಸಾಹಸದಿಂದ ನಿಜವಾದ ರಿಯಲ್ ಲೈಫ್ ಹೀರೋ ಆಗಿದ್ದಾರೆ.
ಬೆಂಕಿ ಬಸ್‌ನ ಇಡೀ ಭಾಗವನ್ನು ಆವರಿಸುತ್ತಿದ್ದಾಗ, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಮೊದಲು ಕಿಟಕಿಯಿಂದ ಸುರಕ್ಷಿತವಾಗಿ ಹೊರಗೆ ಕಳುಹಿಸಿ, ಬಳಿಕ ತಾನೇ ಹೊರಗೆ ಹಾರಿ ಉಳಿದವರನ್ನು ಎಚ್ಚರಿಸಿದರು. ಅವರ ತ್ವರಿತ ನಿರ್ಧಾರವೇ ಅನೇಕರ ಜೀವ ಉಳಿಸಿತು.
ಟಿಡಿಪಿ ಸಂಸದೆ ಬೈರೆಡ್ಡಿ ಶಬರಿ ಹೇಳುವಂತೆ, ಈ ತಂದೆಯಿಲ್ಲದಿದ್ದರೆ ಇನ್ನು 19 ಮಂದಿ ಸಜೀವ ದಹನವಾಗುತ್ತಿದ್ದರು. ದುಃಖದ ಮಧ್ಯೆಯೇ ಹುಟ್ಟಿದ ಈ ಕಥೆ ನಿಜವಾದ ಮಾನವೀಯತೆ ಮತ್ತು ಧೈರ್ಯದ ಉದಾಹರಣೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ
- Advertisement -

