Dharwad News: ಎದೆ ಎತ್ತರಕ್ಕೆ ಬೆಳೆದ ಮಗ, ಉಡಾಳ ಸ್ನೇಹಿತನ ಸಹವಾಸ ಮಾಡಿ ಹಾಳಾಗುತ್ತಿದ್ದ. ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಗಾಗಿದ್ರು. ಹೀಗಾಗಿ ಹೆತ್ತ ತಂದೆ ಮಗನ ಸ್ನೇಹಿತನಿಗೆ ಬುದ್ದಿವಾದ ಹೇಳಿದ್ದ ಅಷ್ಟೇ, ದುಶ್ಚಟಗಳಿಗೆ ದಾಸನಾಗಿದ್ದ ಮಗನ ಸ್ನೇಹಿತ ಅವನ ತಂದೆಯನ್ನೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಮಾಡಬಾರದ ವಯಸ್ಸಿನಲ್ಲಿ ಕೊಲೆ ಮಾಡಿ, ಜೈಲು ಸೇರಿದ್ದಾನೆ, ಪಾಪಿ ಸ್ನೇಹಿತ. ಗದಗ ನಗರದ ತೆಗ್ಗಿನಲಾಟ ನಿವಾಸಿಯಾದ 50 ವರ್ಷದ ಸುರೇಶ್ ಮೂಲಿಮನಿ ಬುದ್ದಿವಾದ ಹೇಳಿದಕ್ಕೆ ಕೊಲೆಯಾಗಿದ್ದಾನೆ. ಅಂದಹಾಗೇ ಕೊಲೆಯಾದ ಸುರೇಶ್ ಅವ್ರ ಮಗ ತರುಣ ಹಾಗೂ ಅದೇ ಏರಿಯಾದ ಸುಬ್ರಹ್ಮಣ್ಯ ಇಬ್ಬರು ಸ್ನೇಹಿತರು. ಸುಬ್ರಹ್ಮಣ್ಯ ದುಶ್ಚಟಗಳಿಗೆ ದಾಸನಾಗಿದ್ದ.
ಹೀಗಾಗಿ ಸುಬ್ರಹ್ಮಣ್ಯನಿಗೆ ತರುಣನ ಸ್ನೇಹ ಮಾಡಬೇಡ ಅವನಿಗೆ ದುಶ್ಚಟಗಳನ್ನು ಕಲಿಸಬೇಡ ಎಂದು ನೀತಿ ಪಾಠ ಹೇಳಿದ್ದ ಕೊಲೆಯಾದ ಸುರೇಶ್. ಇಷ್ಟೇ ವಿಷಯ, ಇದನ್ನೇ ಬಹಳ ಸಿರಿಯಸಾಗಿ ತೆಗೆದುಕೊಂಡ ಸುಬ್ರಹ್ಮಣ್ಯ ಜುಲೈ 15 ರ ರಾತ್ರಿ ಸುರೇಶ್, ಹತ್ತಿಕಾಳ ಕೂಟ ಬಳಿ ಹೋಗುವಾಗ ಚಾಕುವಿನಿಂದ ಹಲ್ಲೆ ಮಾಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿರುವ ಸುರೇಶ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಅಲ್ಲಿಂದ ಎಸ್ಕೇಪ್ ಆಗಿದ್ದ. ಸ್ಥಳೀಯರು ನೋಡಿ ಸುರೇಶ್ ನಶೆಯಲ್ಲಿ ಬಿದ್ದು ಗಾಯಗೊಂಡಿದ್ದಾನೆ ಎಂದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು.
ಆದಾದ ನಂತ್ರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸಾವನ್ನಪ್ಪಿದ್ದಾನೆ. ಪೊಲೀಸರ ತನಿಖೆಯಿಂದ ಇದು ಕೊಲೆ ಎನ್ನುವ ಸತ್ಯ ಬಹಿರಂಗವಾಗಿದೆ. ಕೊಲೆಯಾದ ಸುರೇಶನ ಮಗ ತರುಣನ ಸ್ನೇಹಿತ ಸುಬ್ರಹ್ಮಣ್ಯನೇ ಕೊಲೆ ಮಾಡಿರೋದು ಪೊಲೀಸ ತನಿಖೆಯಿಂದ ಮೇಲ್ನೋಟಕ್ಕೆ ಬಹಿರಂಗವಾಗಿದೆ.
ಸುಬ್ರಹ್ಮಣ್ಯ ಕೊಲೆ ಮಾಡಿದ್ದಾನೆ ಎಂದು ತಿಳಿದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಕೊಲೆ ಮಾಡಿದ ಸುಬ್ರಹ್ಮಣ್ಯನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ರು. ಗದಗ ಶಹರ ಪೊಲೀಸರು ಕೊಲೆ ಮಾಡಿದ ಸುಬ್ರಹ್ಮಣ್ಯನನ್ನು ಬಂಧಿಸಿದ್ದಾರೆ.