Thursday, November 13, 2025

Latest Posts

ಹಿಂದೂ ವಿರೋಧಿ ಹಣೆಪಟ್ಟಿಯ ಭಯ!

- Advertisement -

ಕಲ್ಲು ತೂರಾಟದಿಂದ, ಮದ್ದೂರು ಪಟ್ಟಣ ರಣಾಂಗಣವಾಗಿ ಬದಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಮದ್ದೂರು ಗಲಾಟೆ ಪ್ರೀ ಪ್ಲ್ಯಾನ್ ಅನ್ನೋ ಮಾಹಿತಿ ಗೊತ್ತಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಲೈಟ್‌ ಆಫ್‌ ಮಾಡಿದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಕಲ್ಲು ತೂರಾಟ ನಡೆಸಿರೋದು ರಾಜಕೀಯ ಪ್ರೇರಿತನಾ? ಅಥವಾ ಇದರ ಹಿಂದೆ ಯಾರಿದ್ದಾರೆ? ಹೊರ ಜಿಲ್ಲೆಯವರಾ?, ಇದೇ ಜಿಲ್ಲೆಯವರಾ? ಅನ್ನೋ ಬಗ್ಗೆಯೂ ತನಿಖೆ ಆಗ್ತಿದೆ. ಇದರಲ್ಲಿ ಓಲೈಕೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಒಂದೆರಡು ದಿನದಲ್ಲಿ ತನಿಖಾ ವರದಿ ನೀಡಲು ಸೂಚನೆ ನೀಡಲಾಗಿದೆ. ಹೀಗಂತ ಮದ್ದೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಮತ್ತೊಂದೆಡೆ ಮದ್ದೂರಿನ ಘಟನೆ ಬಗ್ಗೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡ್ತಿದೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಹಿಂದೂ ವಿರೋಧಿ ಪಟ್ಟ ಸಿಕ್ಕಿತ್ತು. ಈ ಬಾರಿಯೂ ಧರ್ಮಸ್ಥಳ ವಿಚಾರ, ದಸರಾ ಉದ್ಘಾಟಕರ ವಿಚಾರದಲ್ಲೂ ಇದೇ ನಡೀತಿದೆ. ಹೀಗಾಗಿ ಮದ್ದೂರು ಕಲ್ಲು ತೂರಾಟ ಕೇಸ್‌ನಲ್ಲಿ, ಇದಕ್ಕೆ ಆಸ್ಪದ ಕೊಡದಂತೆ ಗಮನವಹಿಸಲಾಗಿದೆ.

ಇದರ ಭಾಗವಾಗೇ ಸಚಿವ ಚಲುವರಾಯಸ್ವಾಮಿ, ಧರ್ಮದ ಹೆಸರೇಳಿಯೇ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಸಲ್ಮಾನ ಯುವಕರನ್ನು ಬಂಧಿಸಿದ್ದೀವಿ ಅಂತಾ ಹೇಳಿದ್ದಾರೆ. ಒಟ್ನಲ್ಲಿ ಹಿಂದೂ ವಿರೋಧಿ ಹಣೆಪಟ್ಟಿ ತಪ್ಪಿಸಿಕೊಳ್ಳಲು, ಸರ್ಕಾರ ಶತಪ್ರಯತ್ನ ಮಾಡ್ತಿದೆ.

ಮತ್ತೊಂದೆಡೆ, ಮುಸ್ಲಿಂ ಧರ್ಮದ ವಿರುದ್ಧ ಕೀಳು ಮಟ್ಟದ ಪದ ಬಳಕೆ ಹಿನ್ನೆಲೆ, ಪೊಲೀಸರಿಗೆ ಕಾಂಗ್ರೆಸ್‌ ಮುಖಂಡರೇ ದೂರು ನೀಡಿದ್ದಾರೆ. ಸೆಪ್ಟೆಂಬರ್‌ 8ರಂದು ಮದ್ದೂರಿನ ಪ್ರತಿಭಟನೆಯಲ್ಲಿ, ಜ್ಯೋತಿ ಎಂಬಾಕೆ ಭಾಗಿಯಾಗಿದ್ರು. ಈ ವೇಳೆ ಮುಸ್ಲಿಂ ಧರ್ಮದ ಬಗ್ಗೆ ಕೀಳು ಮಟ್ಟದ ಪದ ಬಳಸಿ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಗೆ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕುಶಾಲ್‌ ದೂರು ಕೊಟ್ಟಿದ್ದಾರೆ.

ಒಂದೆಡೆ ಹಿಂದೂ ವಿರೋಧಿ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ರಾಜ್ಯ ನಾಯಕರ ಮಟ್ಟದಲ್ಲಿ ಸರ್ಕಸ್‌ ನಡೀತಿದ್ರೆ, ಜಿಲ್ಲಾ ಮಟ್ಟದ ನಾಯಕರು ತದ್ವಿರುದ್ಧವಾಗಿ ನಡೆದುಕೊಂಡು ಯಡವಟ್ಟು ಮಾಡಿಕೊಳ್ತಿದ್ದಾರೆ. ಈ ಮೂಲಕ ರಾಜ್ಯ ಮತ್ತು ಜಿಲ್ಲಾ ನಾಯಕರ ನಡುವೆ ಹೊಂದಾಣಿಕೆ ಕೊರತೆ ಇದೆ ಅನ್ನೋದು ಬಹಿರಂಗವಾಗಿದೆ.

- Advertisement -

Latest Posts

Don't Miss