- Advertisement -
Karkala News : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಸುಮಾರು 36 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ಮುರುಗೇಶಿ.ಟಿ.ಯವರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಶುಭವಿದಾಯ ಕೋರಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ವಹಿಸಿದ್ದು,ಆಡಳಿತಾಧಿಕಾರಿ ಪ್ರೋ. ವೈ. ಭಾಸ್ಕರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಡಾ. ನಯನ ಎಂ. ಪಕ್ಕಳ, ಪಾರ್ವತಿ,
ನಿವೃತ್ತ ಕಛೇರಿ ಅಧೀಕ್ಷಕ ರಮಾನಂದ ಶೆಟ್ಟಿಗಾರ್, ಬೋದಕ, ಬೋದಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸೋನಾ ಎಚ್.ಸಿ. ನಿರೂಪಿಸಿ, ಡಾ.ಮಿಥುನ್ ಚಕ್ರವರ್ತಿ ವಂದಿಸಿದರು.
- Advertisement -