Saturday, July 12, 2025

Latest Posts

ಖ್ಯಾತ ಬಹುಭಾಷಾ ಗಾಯಕ ಕೆ.ಕೆ ಇನ್ನಿಲ್ಲ..

- Advertisement -

ಇಡಿ ಚಿತ್ರರಂಗಕ್ಕೇ ಇದು ತುಂಬಾ ವಿಷಾದದ ಸುದ್ದಿ. ನೆನ್ನೆ ಸಂಜೆ ಕೊಲ್ಕತ್ತಾದ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ಕೆ.ಕೆ ಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರುವ ಹೊತ್ತಿಗೆ ಹೃದಯಾಘಾತದಿಂದ ಅಸು ನೀಗಿದ್ದಾರೆ.

ತಮ್ಮ ಮೋಡಿಯ ಕಂಠದಿಂದ‌ ಯುವ ಸಮೂಹವನ್ನು ಪ್ರಭಲವಾಗಿ ಆಕರ್ಷಿಸಿದ್ದ ಕೆ.ಕೆ( ಕೃಷ್ಣಕುಮಾರ್ ಕುನ್ನತ್) ದಿಡೀರ್ ಕಣ್ಮರೆ ನಿಜಕ್ಕೂ ನೋವನ್ನುಂಟು‌ಮಾಡಿದೆ. 1999 ರಲ್ಲಿ ಬಂದ ‘ಹಮ್ ದಿಲ್ ದೇ ಚುಕೇ ಸನಮ್” ಚಿತ್ರದ ‘ತಡಪ್ ತಡಪ್” ಹಾಡು ನಮ್ಮನ್ನು ಈ ಹಾಡುಗಾರ ಯಾರಪ್ಪಾ ಅಂತ ತಡಕುವ ಹಾಗೆ ಮಾಡಿತ್ತು. ಅಲ್ಲಿಂದ ಇಂದಿನವರೆಗೂ ತಮ್ಮ ಸಹಜ ಕಂಠದಿಂದ ಸೆಳೆಯುತ್ತಲೇ ಬರುತ್ತಿದ್ದ ಕೆ.ಕೆ ಧ್ವನಿ ಇಂದು ಸ್ಥಬ್ದವಾಗಿದ್ದರೂ ಅವರ ಹಾಡುಗಳು ನಮ್ಮದೆಯಲ್ಲಿ ಸದಾ ಜೀವಂತವಾಗಿರುತ್ತದೆ.

ಕಾರ್ತಿಕ್ ಕರ್ನಾಟಕ ಟಿವಿ ಬೆಂಗಳೂರು.

- Advertisement -

Latest Posts

Don't Miss