Bengaluru News: ಬಕ್ರಿದ್ ಹಬ್ಬ ಬಂದ್ರೆ ಸಾಕು ನಗರದ ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಲ್ಲಿ ಮೇಕೆಗಳ ಸಂತೆ ನಡೆಯುತ್ತೆ.. ಈ ಬಾರಿ ಕೂಡ ಸಂತೆಗೆ ಮೇಕೆ, ಕುರಿ, ಆಡು, ಟಗರುಗಳು ಬಂದಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರಿದ್ ಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಈ ಹಬ್ಬದ ಸಲುವಾಗಿ ಮೇಕೆ- ಕುರಿಗಳಿಗೆ ಬಾರಿ ಡಿಮ್ಯಾಂಡ್ ಶುರುವಾಗಿದೆ. ಬಕ್ರಿದ್ ಹಬ್ಬದ ಹಿನ್ನೆಲೆ ಚಾಮರಾಜಪೇಟೆ ಸುತ್ತಮುತ್ತ ಕುರಿ, ಮೇಕೆ ಟಗರುಗಳಸಂತೆ ನಡೆಯುತ್ತಿದ್ದು ವಿವಿಧ ತಳಿಯ ಮೇಕೆ, ಕುರಿ ಕಾಣಬಹುದಾಗಿದೆ. ಅದ್ರಲ್ಲಿ ಬಂಡೂರ್ ಕುರಿ, ಅಮಿನ್ ಗಾಡ್ , ನಾಟಿ ತಳಿ, ಕರಿ ಕುರಿ, ಪಾವಗಡ ಕುರಿ ಹಾಗೂ ಜಮುನ ಪುರಿ, ನಾಟಿ ಹೋತಕ್ಕೆ ಭಾರಿ ಡಿಮ್ಯಾಂಡ್ ಇದೆ.
ಇನ್ನೂ ಬಂಡೂರ್ ಕುರಿಗೆ 50 ಸಾವಿರದಿಂದ, 1 ವರೆ ಲಕ್ಷ, ಕಿಲಾರಿ ಕುರಿಗೆ – 80 ಸಾವಿರ, ನಾಟಿ ಕುರಿ- 60 ಸಾವಿರ, ಕರಿ ಕುರಿ – 40 ಸಾವಿರ, ಬಾಗೇವಾಡಿ ಕುರಿ- 1 ವರೆ ಲಕ್ಷ, ಅಮಿನ್ ಗಾಡ್ – 40 ರಿಂದ 60 ಸಾವಿರ, ಪಾವಗಡ ಮತ್ತು ಸಿರ ಟಗರಿಗೆ – 20 – 30 ಸಾವಿರ, ಮೈಲಾರಿ ಟಗರು – 70 ಸಾವಿರ, ಬಾಗೇವಾಡಿ ಟಗರು – 15 ಸಾವಿರ ನಿಗದಿ, ಕಾಶ್ಮಿರಿ ಕುರಿಗೆ – 1 ಲಕ್ಷದ 10 ಸಾವಿರ, ಹೈದರಬಾದಿ ಕುರಿಗೆ – 70 ಸಾವಿರ ನಿಗದಿ ಮಾಡಲಾಗಿದೆ.
ಇನ್ನು ಸಂತೆಗೆ ರಾಜ್ಯದ ರಾಮನಗರ, ಮಂಡ್ಯ, ಮದ್ದೂರು, ಚೆನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ದಾವಣಗೆರೆ , ಮಳವಳ್ಳಿ, ಕೊಳ್ಳೆಗಾಲ, ಹಾಸನ, ಅರಸಿಕೆರೆ ಸೇರಿದಂತೆ ಒಟ್ಟು 25 ತಾಲೂಕು, ಜಿಲ್ಲೆಗಳಿಂದ ವ್ಯಾಪಾರಸ್ಥರು ಬಂದಿದ್ದಾರೆ. ಬಾರಿ ಕುರಿ, ಮೇಕೆ ಟಗರುಗಳ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ವ್ಯಾಪಾರ ಕಡಿಮೆ ಇದೆ ಅಂತ ವ್ಯಾಪಾರಸ್ಥರು ಹೇಳ್ತಿದ್ರೆ, ಕಳೆದ ಬಾರಿಗಿಂತ ಈ ಬಾರಿ ರೇಟ್ ಹೆಚ್ಚಾಗಿದೆ ಅಂತಾರೆ ಗ್ರಾಹಕರು. ಒಟ್ನಲ್ಲಿ, ಬಕ್ರೀದ್ ಸೆಲೆಬ್ರೇಟ್ ಮಾಡೋಕೆ ಬೆಂಗಳೂರು ಭರ್ಜರಿ ಸಿದ್ದವಾಗಿರೋದಂತೂ ಸತ್ಯ.
ವಿಡಿಯೋ ಜರ್ನಲಿಸ್ಟ್ ಮಹಾಂತೇಶ್ ಜೊತೆ ವೀಣಾ ಸಿದ್ದಾಪುರ ಕರ್ನಾಟಕ ಟಿವಿ ಬೆಂಗಳೂರು