Wednesday, December 11, 2024

Latest Posts

ಆಸ್ತಿ ವಿಚಾರವಾಗಿ ಮಾರಾಮಾರಿ: ದೂರು ಕೊಟ್ಟರೂ ಎಫ್‌ಐಆರ್ ದಾಖಲಿಸದ ಪೊಲೀಸರು

- Advertisement -

Dharwad News: ಧಾರವಾಡ: ಆಸ್ತಿ ವಿಚಾರಕ್ಕೆ ಐವರ ಮೇಲೆ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಬೋಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಸ್ತಿ ವಿಚಾರವಾಗಿ ಕಬ್ಬಿಣದ ರಾಡ್‌ನಿಂದ 8 ಜನರು ಹಲ್ಲೆ ಮಾಡಿದ್ದು, ಎರಡು ಕುಟುಂಬಗಳು ಹೊಡೆದಾಡಿಕೊಂಡಿದೆ.

ಕಳೆದ ಎರಡು ದಿನಗಳ ಹಿಂದೆ ಹೊಲದಲ್ಲಿ ಕಬ್ಬು ಕಟಾವು ಮಾಡುವ ವೇಳೆ, ಮಹಿಳೆಯನ್ನು ನೆಲಕ್ಕೆ ಕೆಡವಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಸಾವಿತ್ರಿ ಹಲ್ಲುನ್ನವರ, ದ‌್ಯಾಮವ್ವ, ಮಲ್ಲವ್ವ, ಕಲ್ಲಪ್ಪ,  ಮಂಜುನಾಥ್ ಈ ಐವರ ಹಲ್ಲೆಗೊಳಗಾದವರಾಗಿದ್ದಾರೆ. ನಮ್ಮ ಆಸ್ತಿ ಎಂದು ಕೇದಾರನಾಥ್ ಪಿರಗಾರ, ವಿಠಲ್ ಪಿರಗಾರ, ಮಂಜುನಾಥ್, ಗೋಪಾಲ್, ಬಸವರಾಜ ಹುಲಮನಿ ಎಂಬುವವರು ಹಲ್ಲೆ ಮಾಡಿದ್ದಾರೆ.

ಈ ಕುರಿತು ಸಾವಿತ್ರಿ ಎಂಬುವವರು ಗರಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಹೊಡೆದಾಡಿಕೊಂಡ ವೀಡಿಯೋ ಪೊಲೀಸರಿಗೆ ನೀಡಿದ್ದರು ಕೂಡ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಎಫ್‌ಐಆರ್ ದಾಖಲೆ ಮಾಡದೇ ಇರುವ ಸಲುವಾಗಿ, ಪೊಲೀಸರ ವಿರುದ್ಧ ನೊಂದವರು ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest Posts

Don't Miss