Tuesday, October 14, 2025

Latest Posts

ರೋಗಿಗಳಿಗೆ ಕೊಡಲಿ ಪೆಟ್ಟಿನ ಟ್ರೀಟ್‌ಮೆಂಟ್ ಕೊಡುತ್ತಿದ್ದವನ ವಿರುದ್ಧ ದೂರು ದಾಖಲು

- Advertisement -

Bagalakote News: ಬಾಗಲಕೋಟೆ: ಮೂಢಾಚಾರ ನಡೆಸಿದ್ದವನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯ ಮುಧೋಳ ತಾಲೂಕಿನ ಮೆಟಗುಡ್‌ ಗ್ರಾಮದಲ್ಲಿ ಮೂಢನಂಬಿಕೆ ಇನ್ನೂ ಜೀವಂತವಾಗಿದ್ದು, ಕೊಡಲಿ ಏಟು ತಿಂದರೆ, ರೋಗ ರುಜಿನಗಳು ವಾಸಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇಲ್ಲಿ ಈ ವಿಚಿತ್ರ ಟ್ರೀಟ್‌ಮೆಂಟ್ ಕೊಡುವ ಮೇಟಗುಡ್ ಗ್ರಾಮದ ಜಕ್ಕಪ್ಪ ಗಡ್ಡಿ ಎಂಬುವವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಇವನ ಬಳಿ ಬರುವ ಜನರ ರೋಗ ವಾಸಿ ಮಾಡಲು ಈಗ ಕೊಡಲಿಯಿಂದ ಅವರಿಗೆ ಪೆಟ್ಟು ಕೊಡುತ್ತಾನೆ. ಈ ವೀಡಿಯೋ ವೈರಲ್ ಆದ ಕಾರಣ, ಜಕ್ಕಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೈರಲ್ ವೀಡಿಯೋ ಆಧರಿಿಸಿ, ಲೋಕಾಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಾಖಲಿಸಲಾಗಿದೆ ಎಂದಿ ಬಾಗಲಕೋಟೆ ಎಸ್.ಪಿ. ಅಮರನಾಥ್ ರೆಡ್ಡಿ ಹೇಳಿದ್ದಾರೆ.

- Advertisement -

Latest Posts

Don't Miss