Film News:
“ಖಾರಾಬಾತ್” ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾಗುವ ಖಾದ್ಯ. ಈ “ಖಾರಾಬಾತ್” ಅನ್ನು ಕೇಂದ್ರವಾಗಿಟ್ಟುಕೊಂಡೆ ವಿಜಯ್ ಜಗದಾಲ್ “ರೂಪಾಯಿ” ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಖ್ಯಾತ ಗಾಯಕಿ ಸುಪ್ರಿಯಾ ರಾಮ್ ಈ ಹಾಡನ್ನು ಹಾಡಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪ್ರಸಿದ್ದ ಹೋಟೆಲ್ ನಲ್ಲಿ “ಖಾರಾಬಾತ್” ಖರ್ಚಾಗುವ ಹಾಗೆ, ಈ ಹಾಡು ಕೂಡ ಜನರ ಮನ ಗೆಲ್ಲುತ್ತಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡಿದ್ದಾರೆ.
ವಿಜಯ್ ಜಗದಾಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ನಾಯಕನಾಗೂ ನಟಿಸಿದ್ದಾರೆ. ಕೃಷಿ, ತಾಪಂಡ, ಚಂದನ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ಡಾಲಿ ಧನಂಜಯ ಬಿಡುಗಡೆ ಮಾಡಿದ್ದರು.
“ರೂಪಾಯಿ” ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲಾ ಅಂಶಗಳು ಒಳಗೊಂಡಿದೆ. ಚಿತ್ರದ ಟ್ರೇಲರ್ ಫೆಬ್ರವರಿ 1 ರಂದು ರಿಲೀಸ್ ಆಗಲಿದೆ. ಕುತೂಹಲ ಹುಟ್ಟಿಸಿರುವ ಈ ಚಿತ್ರ ಫೆಬ್ರವರಿ 10ರಂದು ತೆರೆಗೆ ಬರಲಿದೆ. ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಮತ್ತು ವಿನೋದ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್ ಡಿ ನಾಗಾರ್ಜುನ ಛಾಯಾಗ್ರಹಣ, ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ.