Wednesday, December 4, 2024

Latest Posts

Financial Advice: ದುಡ್ಡು ಉಳಿಸಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

- Advertisement -

Financial Advice: ಶ್ರೀಮಂತರಾಗದಿದ್ದರೂ, ಕೊಂಚ ದುಡ್ಡು ಉಳಿಸಿ, ಮುಂದೊಂದು ದಿನ ಕಷ್ಟಕಾಲಕ್ಕೆ ಆ ದುಡ್ಡು ಬಳಕೆಯಾಗುವಂತಿದ್ದರೆ ಸಾಕು ಎನ್ನುವ ಜನರು ಇದ್ದಾರೆ. ಅದರಲ್ಲೂ ಕೊರೋನಾ ಬಂದಾಗ, ದುಡ್ಡಿನ ಬೆಲೆ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಕಷ್ಟಕಾಲಕ್ಕೆ ದುಡ್ಡು ಉಳಿಸಬೇಕು ಅಂತ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಆಸೆಗಳು, ಶೋಕಿಗಳು ದುಡ್ಡು ಉಳಿಸಲು ಬಿಡುವುದಿಲ್ಲ. ಆದರೆ ಶೋಕಿಗಳನ್ನು, ಆಸೆಗಳನ್ನು ಕಂಟ್ರೋಲಿನಲ್ಲಿ ಇಟ್ಟುಕೊಂಡು, ಯಾವ ರೀತಿ ದುಡ್ಡು ಉಳಿಸಬೇಕು ಎಂದು ಹೇಳಲಿದ್ದೇವೆ.

ಮೊದಲನೇಯದಾಗಿ, ಬಟ್ಟೆ ಮತ್ತು ದಿನಸಿಯನ್ನು ಲೋಕಲ್ ಅಂಗಡಿಯಿಂದ ಖರೀದಿಸಿ. ಏಕೆಂದರೆ, ಬ್ರ್ಯಾಂಡೆಡ್ ಬಟ್ಟೆಗಿಂತ ಕೆಲವೊಮ್ಮೆ ಲೋಕಲ್ ಅಂಗಡಿಯಲ್ಲಿ ಸಿಗುವ ಬಟ್ಟೆಗಳ ಕ್ವಾಲಿಟಿ ಉತ್ತಮವಾಗಿರುತ್ತದೆ. ಕೆಲವೊಮ್ಮೆ ಎರಡೂ ಕ್ವಾಲಿಟಿ ಸೇಮ್ ಇರುತ್ತದೆ. ಹಾಗಾಗಿ ಬ್ರ್ಯಾಂಡ್ ಹುಚ್ಚಿಗಾಗಿ ಹೆಚ್ಚು ದುಡ್ಡು ಹಾಳು ಮಾಡದೇ, ಬುದ್ಧಿವಂತಿಕೆ ಉಪಯೋಗಿಸಿ ಬಟ್ಟೆ ಖರೀದಿಸಿ. ಇನ್ನು ದಿನಸಿ ಖರೀದಿಸುವಾಗಲೂ ಕೂಡ ಅದೇ ರೀತಿ ಮಾಡಬೇಕಾಗುತ್ತದೆ. ಪ್ಲಾಸ್ಟಿಕ್ ಮೇಲಿರುವ ಸಿಂಬಾಲ್‌, ಬ್ರ್ಯಾಂಡ್‌ಗಾಗಿ ನೀವು ಹೆಚ್ಚು ದುಡ್ಡು ಕೊಟ್ಟು ದಿನಸಿ ಖರೀದಿಸುವ ಬದಲು, ಕಿರಾಣಿ ಅಂಗಡಿಯಲ್ಲಿ ಸಿಗುವ ಉತ್ತಮ ಕ್ವಾಲಿಟಿ ದಿನಸಿ ಖರೀದಿಸಿ. ಇದರಿಂದ ಕೊಂಚ ಉಳಿತಾಯ ಮಾಡಿ, ಕೂಡಿಡಬಹುದು.

ಎರಡನೇಯದಾಗಿ, ಲೋನ್ ತೆಗೆದುಕೊಳ್ಳುವ ಸಮಯ ಬಂದಾಗ, ಕಡಿಮೆ ಬಡ್ಡಿ ಇರುವ ಬ್ಯಾಂಕ್‌ಗಳನ್ನು ಕಂಪೇರ್ ಮಾಡಿ ನೋಡಿ, ಬಳಿಕ ಲೋನ್ ತೆಗೆದುಕೊಳ್ಳಿ. ಇದರಿಂದ ನಿಮಗೆ ಲಕ್ಷಾಂತರ ರೂಪಾಯಿ ಉಳಿಯುತ್ತದೆ.

ಮೂರನೇಯದಾಗಿ, ಆನ್‌ಲೈನ್ ಶಾಪಿಂಗ್ ಮಾಡುವುದನ್ನು ಕಡಿಮೆ ಮಾಡಿ, ನಿಯಂತ್ರಿಸಿ. ಏಕೆಂದರೆ, ಸ್ವೈಪ್ ಮಾಡುತ್ತ ಹೋದಂತೆ, ಹೊಸ ಹೊಸ ವಸ್ತುಗಳು ಕಾಣಿಸುತ್ತದೆ. ಕಂಡಿದ್ದೆಲ್ಲ ತೆಗೆದುಕೊಳ್ಳಬೇಕು ಎನ್ನಿಸುತ್ತದೆ. ಹಗಾಗಿ ಅವಶ್ಯಕತೆ ಇರುವ ವಸ್ತುಗಳನ್ನಷ್ಟೇ ಖರೀದಿಸಿ. ಮಾಲ್‌ಗೆ ಹೋದಾಗ ಕೂಡ ನೀವು ಇದೇ ಟಿಪ್ಸ್ ಫಾಲೋ ಮಾಡಬೇಕು. ನೋಡಲು ಚೆಂದಗಂಡತೆಂದು ತೆಗೆದುಕೊಂಡರೆ, 2 ಸಾವಿರ ಆಗಬೇಕಾಗಿದ್ದ ಬಿಲ್ 5ರಿಂದ 6 ಸಾವಿರಕ್ಕೆ ಹೋಗುತ್ತದೆ. ಖರ್ಚಿನ ಮೇಲೆ ಕಂಟ್ರೋಲ್ ಇಟ್ಟು, ಹಣ ಉಳಿತಾಯ ಮಾಡಿ. ಉಳಿತಾಯ ಮಾಡಿದ ಹಣವನ್ನು ನಂಬಿಕಸ್ಥ ಮ್ಯೂಚ್ವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ.

- Advertisement -

Latest Posts

Don't Miss