ಮೊನ್ನೆ ಮೊನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ವಿಕಿ ಕೌಶಲ್ ವಿರುದ್ಧ ಇಂದೋರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶೂಟಿಂಗ್ ವೇಳೆ ಬೈಕ್‌ನಲ್ಲಿ ನಟಿ ಸಾರಾ ಅಲಿ ಖಾನ್ ಜೊತೆ ವಿಕಿ ಊರೂರು ತಿರುಗಬೇಕಿತ್ತು. ಹಾಗಾಗಿ ಸಿನಿಮಾ ಟೀಮ್ ನೀಡಿದ್ದ ಗಾಡಿಯನ್ನ ಹತ್ತಿ ವಿಕಿ ಮತ್ತು ಸಾರಾ ರೈಡಿಂಗ್ ಮಾಡಿದ್ದಾರೆ. ಆದ್ರೆ ಆ ಗಾಡಿಯ ನಂಬರ್ ಪ್ಲೇಟ್ ಬೇರೆಯವರ ಗಾಡಿಯ ನಂಬರ್ ಕಾಪಿ ಮಾಡಲಾಗಿದೆ. ಹಾಗಾಗಿ ಆ ನಂಬರ್ ಮಾಲೀಕ ಜೈ ಸಿಂಗ್ ಯಾದವ್ ಇಂದೋರ್ ಪೊಲೀಸ್ ಠಾಣೆಯಲ್ಲಿ ವಿಕಿ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಇಂದೋರ್ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಜೈ ಸಿಂಗ್, ಇದು ಗೊತ್ತಿಲ್ಲದೇ ಆಗಿರುವ ತಪ್ಪಾದರೂ, ಹೀಗೆ ಬೇರೆಯವರ ನಂಬರ್ ಪ್ಲೇಟ್ ಕಾಪಿ ಮಾಡುವುದು ತಪ್ಪು. ಶೂಟಿಂಗ್‌ಗಾಗಿ ಈ ರೀತಿ ನನ್ನ ನಂಬರ್ ಬಳಸಿದ್ದು ಇಷ್ಟವಾಗದ ಕಾರಣ ನಾನು ದೂರು ದಾಖಲಿಸಿದ್ದೇನೆ ಎಂದಿದ್ದಾರೆ. ಈ ರೀತಿ ತನ್ನದಲ್ಲದ ತಪ್ಪಿಗೆ ವಿಕಿ ಹೆಣಗಾಡುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಕೆಲವರು ವಿಕಿ ಪರ ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ವಿಕಿ ವಿರುದ್ಧ ಮಾತನಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 5ರಂದು ನಟಿ ಕಟ್ರೀನಾ ಕೈಫ್ ಮತ್ತು ವಿಕಿ ಕೌಶಲ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2012ರಲ್ಲಿ ತೆರೆಕಂಡ ಗ್ಯಾಂಗ್ಸ್ ಆಫ್ ವಸೈಪುರ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿರಿಸದ ವಿಕ್ಕಿ, 2019ರಲ್ಲಿ ತೆರೆಕಂಡ ಉರಿ ಚಿತ್ರದಿಂದ ಸಕ್ಸಸ್ ಗಳಿಸಿದ್ರು. ನಂತರದಲ್ಲಿ ಬಾಲಿವುಡ್‌ನಲ್ಲಿ ವಿಕಿಗೆ ಉತ್ತಮ ಆಫರ್ ಬರಲಾರಂಭಿಸಿದೆ.