ರಜೆ ಎಂದು ಸುಳ್ಳು ಆದೇಶ ಪತ್ರ ವೈರಲ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲು: ಮುಲ್ಲೈ ಮುಗಿಲನ್

Mangaluru News: ಮಂಗಳೂರಿನಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದ್ದ ಕಾರಣ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಶಾಲಾ-ಕಾಲೇಜುಗಳಿಗೆ ಹೆಚ್ಚು ರಜೆ ಘೋಷಿಸಿದ್ದಾರೆ.

ಆದರೆ ಪುಂಡ ಪೋಕರಿಗಳು ಇದನ್ನೇ ನೆಪವಾಗಿ ಇಟ್ಟುಕೊಂಡು, ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಆದೇಶ ಪತ್ರ ಹೊರಡಿಸಿದ್ದಾರೆ. ಇಂಥವರ  ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

ಜುಲೈ 18ರಂದು ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆಂಬ ಆದೇಶ ಪತ್ರ ವೈರಲ್ ಆಗಿದೆ. ಇನ್ನು ಅದ್ಹೇಗೆ ಆದೇಶ ಪತ್ರ ರಚಿಸಲಾಗಿದೆ ಅಂದ್ರೆ, ಈ ಹಿಂದಿನ ಆದೇಶ ಪತ್ರವನ್ನು ತಿದ್ದಿ, ದಿನಾಂಕ ಬದಲಾಯಿಸಲಾಗಿದೆ. ಪುಂಡರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author