ಬೆಂಗಳೂರು: ಯಲಹಂಕದ ಅನಂತಪುರ ಗೇಟ್ ಬಳಿ ಇರುವ ಕೆಪಿಟಿಸಿಎಲ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
11 ಕೆಪಿಟಿಸಿಎಲ್, 2 ಬಿಎಚ್ಇಎಲ್ ಹಾಗೂ ಇತರೆ ಇಬ್ಬರು ಇಂಜಿಯರ್‌ಗಳು ಗಾಯಗೊಂಡಿದ್ದು, ಎಲ್ಲರನ್ನೂ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅನಂತ್‌ಪುರ ಗೇಟ್ ಬಳಿ ನಸುಕಿನ ಜಾವ 3.30ಕ್ಕೆ ಅವಘಡ ಸಂಭವಿಸಿರೋದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಆಸ್ಪತ್ರೆಗೆ ಅಲೆದಾಟ
ಗಾಯಾಳುಗಳನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಬೆಡ್ ಇಲ್ಲದ ಕಾರಣಕ್ಕೆ ವಾಪಸು ಕಳುಹಿಸಿದರು. ಮತ್ತೊಂದು ಆಸ್ಪತ್ರೆಗೆ ಹೋದರೂ ಗಾಯಾಳುಗಳಿಗೆ ಚಿಕಿತ್ಸೆ ಸಿಗಲಿಲ್ಲ.ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಗಾಯಾಳುಗಳು ಗೋಗರೆಯುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಾಗೇಂದ್ರ ಆರೂಡಿ, ಕರ್ನಾಟಕ ಟಿವಿ ಬೆಂಗಳೂರು