Banglore news:
ರಾಜ್ಯ ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಮೀನೂಟ ಮನೆ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಮೀನು ಪ್ರಿಯರಿಗೆ ನೆಚ್ಚಿನ ಖಾದ್ಯಗಳನ್ನು ಸವಿಯುವ ಸಿಹಿಸುದ್ದಿ ನೀಡಿದೆ.
ವಿಧಾನ ಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ, ಬೆಂಗಳೂರಿನಲ್ಲಿ ಐದು ಕಡೆ ಮೀನೂಟದ ಮನೆಗಳನ್ನು ಆರಂಭಿಸಲಾಗುವುದು. ಈ ಹಿಂದೆ ಇದನ್ನು ಸ್ಥಾಪಿಸಲಾಗಿದೆಯಾದರೂ ಹಣಕಾಸಿನ ಕೊರತೆಯ ಹಿನ್ನಲೆಯಲ್ಲಿ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಇಲಾಖೆಯೇ ಮೀನಿನ ಹೋಟೆಲ್ ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು,ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಲಿಂಗನಮಕ್ಕಿ, ಭದ್ರಾ ಸೇರಿ ರಾಜ್ಯದ ಪ್ರಮುಖ 12 ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಸಿದ್ದು ವಿರುದ್ಧ ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ: ಮೊಟ್ಟೆ ಒಡೆದು ಪ್ರತಿಭಟನೆ