Health tips
ಅಗಸೆ ಬೀಜಗಳ ಅದ್ಬುತ ಗುಣಗಳ ಬಗ್ಗೆ ತಿಳಿದರೆ ಇಂದಿನಿಂದಲೇ ಸೇವಿಸಲು ಆರಂಭಿಸುತ್ತೀರಿ. ಅಗಸೆ ಬೀಜಗಳು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಲು ಸಹಕಾರಿಯಾಗಿದೆ. ಇದು ಆಸ್ತಮಾ, ಮಲಬದ್ಧತೆಯನ್ನು ದೂರವಿರಲು ಸಹಾಯ ಮಾಡುತ್ತದೆ.ಅಗಸೆಬೀಜವು ಲಿಗ್ನಾನ್ಸ್ ಎಂಬ ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದೆ, ಇದು ಪಾಲಿಫಿನಾಲ್‌ಗಳು ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು .ಅಗಸೆ ಬೀಜವನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ವಿವಿಧ ರೀತಿಯಲ್ಲಿ ತೆಗೆದುಕೊಳ್ಳಬಹುದು ನೀವು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸಿದ್ದರೆ ಪ್ರತಿ ನಿತ್ಯ ಒಂದು ಚಮಚ ಅಗಸೆ ಬೀಜ ತೆಗೆದುಕೊಳ್ಳುವುದು ಉತ್ತಮ .ಅಗಸೆ ಬೀಜವನ್ನು ನೀವು ಮುಂಜಾನೆ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಬಹುದು ಇದರಿಂದ ನಿದ್ರಾ ಹೀನತೆ ಇರುವವರಿಗೆ ಒಳ್ಳೆ ನಿದ್ರೆ ಬರುತ್ತದೆ ಹಾಗು ನಿಮಗೆ ಯಾವುದೇ ರೀತಿಯ ದೈಹಿಕ ಸಮಸ್ಯೆ ಇದ್ದರೆ, ಅಗಸೆ ಬೀಜ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಅಗಸೆ ಬೀಜಗಳು ದೇಹದ ಕೊಲೆಸ್ಟ್ರಾಲ್(Cholesterol) ಅನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ .ಡಾಕ್ಟರ್ಸ್ ಪ್ರಕಾರ ಪ್ರತಿದಿನ ಅಗಸೆ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು 6 ರಿಂದ 11 ರಷ್ಟು ಕಡಿಮೆ ಮಾಡಬಹುದು. ಇದರಲ್ಲಿ ಹೆಚ್ಚಾಗಿ ಫೈಬರ್ ಮತ್ತು ಲಿಗ್ನಿನ್ ಅಂಶವನ್ನು ಹೊಂದಿರುವುದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್(Cholesterol) ಅನ್ನು ಅತಿ ಬೇಗ ಕಡಿಮೆಮಾಡುತ್ತದೆ .
ಹಾಗು ಇದರ ಸೇವನೆಯಿಂದ ಮುಖದ ಚರ್ಮ ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಸಹಾಯಕವಾಗುತ್ತದೆ ,ಮತ್ತು ನಿಮ್ಮ ಮುಖದ ಚರ್ಮವನ್ನ ಹೊಳೆಯುವಂತೆ ಮಾಡುತ್ತದೆ .
ಆರೋಗ್ಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಅಗಸೆ ಬೀಜಗಳನ್ನ ಹೊಲಗಳಲ್ಲಿ ಬೆಳೆದವು ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಆದಷ್ಟು ರೈತರ ಹೊಲಗಳಲ್ಲಿ ಬೆಳೆದ ಅಗಸೆಬೀಜವನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ. ವಾಸ್ತವವಾಗಿ, ಅಗಸೆ ಬೀಜ ಮೇಲ್ಭಾಗದಲ್ಲಿ ಕಂದು ಮಿಶ್ರಣವನ್ನು ಹೊಂದಿರುತ್ತವೆ, ಇದು ಕರುಳಿಗೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ ಮತ್ತು ಈ ಕಾರಣದಿಂದಾಗಿ ದೇಹವು ಅಗಸೆಬೀಜದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವುಗಳನ್ನ ಪುಡಿ ಮಾಡಿ ಸೇವಿಸುವುದು ಬಹಳ ಉತ್ತಮ ಎಂದು ಹೇಳಬಹುದು.
ಪ್ಲೇಟ್‌ಲೆಟ್ ಅಂದರೆ ಏನು…? ಪ್ಲೇಟ್‌ಲೆಟ್‌ಗಳು ಏಕೆ ಕಡಿಮೆಯಾಗುತ್ತದೆ… ?
ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ತೂಕ ಕಡಿಮೆಯಾಗುತ್ತಿಲ್ವಾ..?! ಹಾಗಾದ್ರೆ ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ :