Mondagodu: NMD ಜಮೀರ್ ಅಹ್ಮದ್ ದರ್ಗಾವಾಲೆ ಹ* ಕೇಸ್: ಐವರು ಆರೋಪಿಗಳ ಬಂಧನ

Uttara Kannada News: ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯ ಅಸಲೀಯತ್ತನ್ನು ಮುಂಡಗೋಡ ಪೊಲೀಸ್ರು ಬೇಧಿಸಿದ್ದಾರೆ. ಹತ್ಯೆ ನಡೆದ 24 ಗ‌ಂಟೆಯೊಳಗಾಗಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್‌ನಲ್ಲಿ ಊಟಕ್ಕೆ ಕುಳಿತಿದ್ದ NMD ಜಮೀರ್ ದರ್ಗಾವಾಲೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಭಯಾನಕವಾಗಿ ಹತ್ಯೆ ಮಾಡಿದ್ದರು. ಹೀಗಾಗಿ, ತಕ್ಷಣವೇ ಅಲರ್ಟ್ ಆಗಿದ್ದ ಮುಂಡಗೋಡ ಪೊಲೀಸರು ಮೂರು ತಂಡಗಳನ್ನು ರಚಿಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಪರಿಣಾಮ ಬೆಂಗಳೂರಿನ ನೆಲಮಂಗಲದ ಬಳಿ ಐವರು ಆರೋಪಿಗಳನ್ನು ಬಂಧಿಸಿ ತಂದಿದ್ದಾರೆ ಪೊಲೀಸ್ರು.

ಮುಂಡಗೋಡ ತಾಲೂಕು ಸಾಲಗಾಂವಿಯ ಮಂಜುನಾಥ ನಾಗೇಂದ್ರ ಕಾಜಗಾರ(30) , ಇಂದಿರಾನಗರದ ಶ್ರೀಕಾಂತ ರಾಜಶೇಖರ ಕಿರಣ್ಣನವರ(22), ಧಾರವಾಡದ ಮಂಜುನಾಥ ವಿಷ್ಣು ಬೆಳಗಾಂವ್(20) ಅಭಿಷೇಕ ತಂದೆ ಮಲ್ಲಕಾರ್ಜುನ ಬಡಶೆಟ್ಟಿ(22), ದೀಪಕ ನಾಗರಾಜ ನವಲೆ,
ಎಂಬುವ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರಿನ ನೆಲಮಂಗಲದ ಬಳಿ ಅರೆಸ್ಟ್..!
ಅಂದಹಾಗೆ, ಭೀಕರ ಹತ್ಯೆ ಮಾಡಿ ಕಾರಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಬಂಧಿಸಲಾಗಿದೆ. ಇನ್ನು ಆರೋಪಿತರು ಕೃತ್ಯಕ್ಕೆ ಬಳಸಿದ ಎರಡು ಬೈಕ್, ಒಂದು ಕಾರು ಹಾಗೂ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 06 ಸಜೀವ ಗುಂಡುಗಳನ್ನು ಆರೋಪಿತರಿಂದ ವಶಪಡಿಸಿಕೊಂಡಿದ್ದಾರೆ.

ಕೊಲೆಗೆ ಕಾರಣ
ಇನ್ನು, ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಪ್ರಕರಣದ ಒಂದನೇ ಆರೋಪಿತನಾದ ಮಂಜುನಾಥ ನಾಗೇಂದ್ರ ಕಾಜಗಾರ ಈತ ಮೃತನಾದ ಜಮೀರ ಅಹ್ಮದ್ ದರ್ಗಾವಾಲೆಯೊಂದಿಗೆ, ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ದ್ವೇಷ ಭಾವನೆಯುಳ್ಳವನಾಗಿದ್ದು, ಆ ಕಾರಣದಿಂದ ಪ್ರಕರಣದ ಇತರೆ ನಾಲ್ಕು ಜನ ಆರೋಪಿತರಿಗೆ ಹತ್ಯೆ ಮಾಡಲು ಪ್ರೇರೆಪಿಸಿ ಸುಪಾರಿ ನೀಡಿ ಸಂಘಟಿತವಾಗಿ ತಂಡ ರಚಿಸಿ ಕೊಲೆ ಮಾಡಿದ್ದಾನೆ ಅಂತಾ ತಿಳಿದು ಬಂದಿದೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪು ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್, ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಗೋಕರ್ಣ ಠಾಣೆ ಪಿಐ ಶ್ರೀಧರ ಎಸ್.ಆರ್, ಪಿಎಸ್ಐ ಮಂಜುನಾಥ ಗೌಡರ, ಚಿತ್ತಾಕುಲ ಠಾಣೆ ಪಿಎಸ್ಐ ಪರಶುರಾಮ ಮಿರ್ಜಗಿ, ಯಲ್ಲಾಪುರ ಠಾಣೆ ಪಿಎಸ್ಐ ರಾಜಶೇಖರ ವಂದಲಿ ರವರ ನೇತೃತ್ವದಲ್ಲಿ, ಮುಂಡಗೋಡ ಠಾಣೆ ಸಿಬ್ಬಂದಿಗಳಾದ ತಿರುಪತಿ ಚೌಡಣ್ಣನವರ, ಲಂಬಾಣಿ ಬಸವರಾಜ, ಮಹಾಂತೇಶ ಮುಧೋಳ, ಮುತ್ತಣ್ಣ ಭೋದಿ, ನಾಗಪ್ಪ ಮೋರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ, ಬಸವರಾಜ ಒಡೆಯರ್, ಯಲ್ಲಾಪುರ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಮಹಮ್ಮದ ಶಫೀ ಶೇಖ, ಬಸವರಾಜ ಹಗರಿ, ಪ್ರವೀಣ ಪೂಜಾರ, ಗೊಂಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತ ಕಟಟರ ಹಾಗೂ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಯಾದ ಉದಯ ಗುನಗಾ, ಬಬನ್ ಕದಂ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author