Sunday, March 3, 2024

Latest Posts

ಮೈಸೂರು-ಬೆಂಗಳೂರು ವಿಮಾನ ಸಂಚಾರ ಪ್ರಾರಂಭ..!

- Advertisement -

ಮೈಸೂರು:  ಮೈಸೂರು-ಬೆಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಲಾಗಿದೆ. ಇಂದು ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3ರ ಯೋಜನೆಯಡಿಯಲ್ಲಿ ಮೈಸೂರಿನಿಂದ ಫ್ಲೈಟ್ ಸೇಲೆ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 11.145ಕ್ಕೆ ಮೈಸೂರಿಗೆ ಆಗಮಿಸೋ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ ವಿಮಾನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಮೈಸೂರಿನಿಂದ ಹೈದ್ರಾಬಾದ್ ಗೆ ಈಗಾಗಲೇ ವಿಮಾನ ಸೇವೆ ಚಾಲ್ತಿಯಲ್ಲಿದೆ.

ಮೊದಲ ದಿನದ ವಿಮಾನ ಸೇವೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ 32 ಜನ ಪ್ರಯಾಣಿಸಿದ್ದು, ಟಿಕೆಟ್ ನ ಬೆಲೆ 1500ರೂ ನಿಗದಿಗೊಳಿಸಲಾಗಿದೆ. ಇನ್ನು ಜುಲೈ ಮೊದಲ ವಾರದಲ್ಲಿ ಮೂರು ವಿಮಾನಗಳು ಕಾರ್ಯಾರಂಭ ಮಾಡಲಿದ್ದು. ರನ್ ವೇ ಮತ್ತಿತರ ಕಾಮಗಾರಿಗಾಗಿ 280 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. 

ಉದ್ಘಾಟನಾ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಸಚಿವ ಜಿ.ಟಿ ದೇವೇಗೌಡ, ಸಾ.ರಾ ಮಹೇಶ್ ಮತ್ತಿತರರು

ವಿಮಾನ ಸಂಚಾರ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವ ಸಾ ರಾ ಮಹೇಶ್ ಮತ್ತಿತರರು ಭಾಗಿಯಾಗಿದ್ದರು.

ಕಾಯಿನ್ ಹಾಕಿದ್ರೂ ಕುಡಿಯೋ ನೀರು ಬರಲ್ಲ…! ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಪ್ಪದೇ ನೋಡಿ

https://www.youtube.com/watch?v=Avg3XQ9SwTo
- Advertisement -

Latest Posts

Don't Miss