Tuesday, October 7, 2025

Latest Posts

ಗಣೇಶೋತ್ಸವ ಸಂಭ್ರಮ ವೇಳೆ ಸುಪ್ರೀಂಕೋರ್ಟ್ ಆದೇಶ ಪಾಲಿಸಿ, ಇಲ್ಲವಾದಲ್ಲಿ ಕಾನೂನು ಕ್ರಮ- ಶಶಿಕುಮಾರ್

- Advertisement -

Hubli News: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶೋತ್ಸವ ಬರಲಿದ್ದು, ಈ ವೇಳೆ ಗಣೇಶೋತ್ಸವದ ಸಂಭ್ರಮದ ವೇಳೆ ಡಿಜೆ ಸಿಸ್ಟಮ್ ಸೇರಿ ಎಲ್ಲ ವಿಚಾರದಲ್ಲೂ ಸುಪ್ರೀಂ ಕೋರ್ಟ್ ಆದೇಶ ಎಲ್ಲರು ಪಾಲಿಸಬೇಕು, ಇಲ್ಲಾವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು, ಯಾವುದೇ ಧಾರ್ಮಿಕ ಕಾರ್ಯಕ್ರಮ ಇದ್ದರೂ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆ ಕಾರ್ಯಕ್ರಮ ರಾತ್ರಿ 10 ಗಂಟೆಗೆ ಮುಕ್ತಾಯವಾಗಬೇಕು. 10 ಗಂಟೆಯೊಳಗೆ ಲೌಡ್ ಸ್ಪೀಕರ್‌ಗಳು ಬಂದ್ ಆಗಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಬರುವುದಿಲ್ಲ. ಸಾಕಷ್ಟು ಜನ ಹಾಗೂ ಮಂಡಳಿಯವರು ಪ್ರತಿವರ್ಷ ನಮಗೆ ಮನವಿ ಮಾಡುತ್ತಾರೆ.

ಅವರು ಸಂಭ್ರಮದಿಂದ ಹಬ್ಬ ಮಾಡುತ್ತಾರೆ, ಅವರ ಮನವಿ ಮೇಲ್ನೋಟಕ್ಕೆ ನಮಗೆ ಸರಿ ಎನಿಸಿದರೂ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಎಲ್ಲವನ್ನೂ ಬಂದ್ ಮಾಡಲೇಬೇಕು. ಡಿಜೆಗೆ ಅನುಮತಿ ಕೊಡಬೇಕೋ ಬೇಡವೋ ಎಂಬುದರ ಬಗೆಗಿನ ಚರ್ಚೆ ಇನ್ನೂ ಆರಂಭವಾಗಿಲ್ಲ. ಮೊನ್ನೆಯಷ್ಟೇ ಈ ಬಗ್ಗೆ ಪಾಲಿಕೆಯಲ್ಲಿ ಸಭೆ ನಡೆಸಲಾಗಿದೆ. ನಾವೂ ಈ ಸಂಬಂಧ ಸರಣಿ ಸಭೆಗಳನ್ನು ಮಾಡಬೇಕಿದ್ದು, ಸಭೆಯಲ್ಲಿ ಡಿಜೆಗೆ ಪರವಾನಿಗಿ ಕೊಡಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

- Advertisement -

Latest Posts

Don't Miss