Tuesday, September 23, 2025

Latest Posts

ಕೋಪವನ್ನು ಕಂಟ್ರೋಲ್ ಮಾಡಿ, ತಾಳ್ಮೆಯಿಂದಿರಲು ಈ ಟಿಪ್ಸ್ ಫಾಲೋ ಮಾಡಿ

- Advertisement -

Life Lesson: ಕೋಪ ಅನ್ನೋದು ನಮ್ಮ ನೆಮ್ಮದಿಯನ್ನು ಹಾಳು ಮಾಡಿ, ಸಂಬಂಧವನ್ನು ಹಾಳು ಮಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಕೆಟ್ಟ ಅಸ್ತ್ರ. ಕೋಪ ಅನ್ನೋದು ನಮ್ಮನ್ನೇ ಸುಡುವ, ನಮ್ಮಲ್ಲೇ ಇರುವ ಅಗ್ನಿ. ಹಾಗಾಗಿ ನಾವು ಎಷ್ಟು ಕೋಪ ಕಂಟ್ರೋಲ್ ಮಾಡಿ ಬದುಕುತ್ತೇವೋ, ಅಷ್ಟು ನಮಗೇ ಉತ್ತಮ. ಹಾಗಾದ್ರೆ ತಾಳ್ಮೆಯಿಂದಿರಲು ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಕೋಪ ಹೆಚ್ಚಾಗುವುದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ. ಬಿಪಿ ನಮ್ಮನ್ನು ಆವರಿಸುತ್ತದೆ. ಬಿಪಿ ಅನ್ನೋದು ಸಾಮಾನ್ಯ ಸಮಸ್ಯೆ ಅಂತಲೇ ಅನ್ನಿಸುತ್ತದೆ. ಆದರೆ ಸಡನ್ ಆಗಿ, ವಯಸ್ಸಲ್ಲದ ವಯಸ್ಸಿಗೆ ಸಾವು ಬರುವುದಕ್ಕೂ ಈ ಬಿಪಿಯೇ ಕಾರಣವಾಗುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸಿ, ಆರೋಗ್ಯವನ್ನು ವೃದ್ಧಿಸಬೇಕು.

ನಮ್ಮ ಕೋಪ ಕಡಿಮೆ ಮಾಡಲು ನಾವು ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು. ಇದರಿಂದ ಮನಸ್ಸು ಶಾಂತ ರೀತಿಯಲ್ಲಿ ವರ್ತಿಸಲು ಶುರು ಮಾಡುತ್ತದೆ. ಯೋಚನಾ ಶಕ್ತಿ ಹೆಚ್ಚಾಗುತ್ತದೆ. ಯೋಚಿಸುವ ಗುಣ ಹೆಚ್ಚಾದಾಗ, ಕೋಪ ಕಡಿಮೆಯಾಗುತ್ತದೆ. ನಮ್ಮ ಮೆದುಳಿಗೆ ವಿಶ್ರಾಂತಿ ಸಿಗದಿದ್ದಾಗಲೇ, ನಮಗೆ ಕೋಪ ಬರುತ್ತದೆ. ಆ ಮೆದುಳಿಗೆ ವಿಶ್ರಾಂತಿ ಬೇಕೆಂದಲ್ಲಿ, ಯೋಗ, ಧ್ಯಾನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕ“ಳ್ಳಬೇಕು.

ಎರಡನೇಯದಾಗಿ ಕೋಪ ಹೆಚ್ಚಾದಾಗ, ಸಡನ್ ಆಗಿ ಪ್ರತಿಕ್ರಿಯಿಸುವ ಬದಲು, ಕಣ್ಣು ಮುಚ್ಚಿ, ನಿಮ್ಮ ಮನಸ್ಸನ್ನು ಶಾಂತಗ“ಳಿಸಲು ಪ್ರಯತ್ನಿಸಿ. ಈ ಪ್ರಯತ್ನ, ಅದೆಷ್ಟೋ ಸಂಬಂಧ, ನೆಮ್ಮದಿ ಹಾಳಾಗುವುದನ್ನು ತಡೆಯುತ್ತದೆ.

- Advertisement -

Latest Posts

Don't Miss