Monday, April 21, 2025

Latest Posts

ನೀವು ಶಕ್ತಿಯುತರಾಗಿ, ಚೈತನ್ಯದಾಯಕರಾಗಿರಬೇಕು ಅಂದ್ರೆ ಇದನ್ನ ಸೇವಿಸಿ..

- Advertisement -

ಬ್ಯುಸಿ ಲೈಫ್‌ನಲ್ಲಿ ಕಳೆದು ಹೋಗುತ್ತಿರುವ ಯುವ ಪೀಳಿಗೆಗೆ ಸರಿಯಾಗಿ ಆಹಾರ ಸೇವಿಸಲು ಕೂಡ ಸಮಯವಿಲ್ಲ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಿನ್ನಲಾಗಲಿಲ್ಲವೆಂದು, ಬ್ರೆಡ್, ಬಿಸ್ಕತ್ ತಿಂದು ಹೊರಡುವ ಜನ, ಮಧ್ಯಾಹ್ನ ಹೊಟೇಲ್‌ನಲ್ಲೇ ಊಟ ಮುಗಿಸುತ್ತಾರೆ. ಇನ್ನು ಸಂಜೆ ಸ್ನ್ಯಾಕ್ಸ್ ತಿನ್ನಲು ಮತ್ತೆ ಹೊಟೇಲ್‌ಗೆ ಹೋಗುತ್ತಾರೆ. ರಾತ್ರಿ ಊಟವೂ ಅಲ್ಲಿಂದಲೇ ಪಾರ್ಸಲ್ ತೆಗೆದುಕೊಳ್ಳುತ್ತಾರೆ. ಹೀಗೆ 24 ತಾಸು ಹೊಟೇಲ್ ತಿಂಡಿ ತಿಂದರೆ, ದೇಹದಲ್ಲಿ ಶಕ್ತಿ ಎಲ್ಲಿಂದ ಬರಬೇಕು..? ಹಾಗಾಗಿ ನಾವಿಂದು ಶಕ್ತಿಯುತರಾಗಲು ಕೆಲ ಸಲಹೆಗಳನ್ನ ನೀಡಲಿದ್ದೇವೆ.

ನೀವು ಶಕ್ತಿವಂತರಾಗಬೇಕು, ಚೈತನ್ಯದಾಯಕವಾಗಿರಬೇಕು ಅಂದ್ರೆ ಪ್ರತಿದಿನ ಎರಡರಿಂದ ಮೂರು ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ನಂತರ ಉಗುರು ಬೆಚ್ಚು ಹಾಲು ಕುಡಿಯಬೇಕು. ಒಂದು ಗಂಟೆ ಬಳಿಕ ತಿಂಡಿ ತಿಂದರೆ ಸಾಕು. ಇನ್ನು ಎರಡನೇಯದಾಗಿ ಮುಸ್ಲಿ ಪೌಡರ್ ಸೇವನೆ. ಹಾಲಿನೊಂದಿಗೆ ಮುಸ್ಲಿ ಪೌಡರ್ ಸೇರಿಸಿ ಕುಡಿದರೆ ಶಕ್ತಿ ಬರುತ್ತದೆ. ಮುಸ್ಲಿ ಪೌಡರ್ ಮಾರ್ಕೆಟ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸಿಗುತ್ತದೆ. ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲಿಗೆ ಒಂದು ಸ್ಪೂನ್ ಮುಸ್ಲಿ ಪೌಡರ್ ಸೇರಿಸಿದರೆ ಸಾಕು.

ಇನ್ನು ಹಾಲಿನೊಂದಿಗೆ 10 ನೆನೆಸಿನ ಕಡಲೆ, ಮತ್ತು 10 ಒಣ ದ್ರಾಕ್ಷಿ ತಿಂದರೂ ಶಕ್ತಿ ಬರುತ್ತದೆ. ರಾಗಿ ಅಂಬಲಿ, ರಾಗಿ ಮಾಲ್ಟ್ ಕುಡಿದರೆ ಉತ್ತಮ. ಇನ್ನು ಪ್ರತಿನಿತ್ಯ ಕೊಂಚವಾದರೂ ತುಪ್ಪದ ಸೇವನೆ ಮಾಡಿ. ಇದರಿಂದ ಶಕ್ತಿ ಬರುವುದಲ್ಲದೇ, ಮೂಳೆ ಗಟ್ಟಿಯಾಗುತ್ತದೆ. ಪ್ರತಿದಿನ ಊಟದ ಬಳಿಕ ಒಂದು ಬಾಳೆ ಹಣ್ಣು ಸೇವನೆ ಮಾಡಿ. ಇನ್‌ಸ್ಟಂಟ್ ಎನರ್ಜಿ ಬೇಕಾದವರು ಬಾಳೆ ಹಣ್ಣನ್ನ ಸೇವಿಸುತ್ತಾರೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿಂದ್ರೆ ಕೆಲವರಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ.

- Advertisement -

Latest Posts

Don't Miss