Friday, April 18, 2025

Latest Posts

ಬೆಳಿಗ್ಗೆ 9 ಗಂಟೆಯೊಳಗೆ ಈ ಆಹಾರಗಳನ್ನು ತಿನ್ನಲೇಬೇಡಿ.. ಇಲ್ಲವಾದಲ್ಲಿ ಬೊಜ್ಜು ಹೆಚ್ಚುತ್ತದೆ…

- Advertisement -

ಬೆಳಿಗ್ಗೆ ನಾವು ಯಾವ ಆಹಾರವನ್ನು ಸೇವಿಸುತ್ತೆವೋ, ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ತುಂಬಾ ಇಂಪಾರ್ಟೆಂಟ್. ನಾವು ಉತ್ತಮ ಆಹಾರ ಸೇವಿಸಿದ್ರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ತೂಕ ಕೂಡ ಕರೆಕ್ಟ್ ಆಗಿರುತ್ತದೆ. ಅದೇ ನಾವು ಜಂಕ್ ಫುಡ್ ತಿಂದ್ರೆ, ನಮ್ಮ ದೇಹದ ತೂಕ ಹೆಚ್ಚುತ್ತದೆ. ಹಾಗಾದ್ರೆ ಬೆಳಿಗ್ಗೆ 9 ಗಂಟೆಗೂ ಮುನ್ನ ತಿನ್ನಬಾರದ ತಿಂಡಿಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸಿರಿಯಲ್ಸ್ ಮತ್ತು ಓಟ್ಸ್- ಸಿರಿಯಲ್ಸ್ ಮತ್ತು ಓಟ್ಸನ್ನ ಡಯಟ್ ಮಾಡುವವರು ತಿಂತಾರೆ. ಆದ್ರೆ ಇದು ಹೇಗೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳೋದಾದ್ರೆ, ಇದಕ್ಕೆ ನೀವು ಹಣ್ಣು, ಹಾಲು ಸೇರಿಸಿ ತಿಂತೀರಾ. ಇದರ ಜೊತೆ ನೀವು ಜೇನುತುಪ್ಪ ಸೇರಿಸಿದ್ರೆ, ಇದು ಆರೋಗ್ಯಕರವೇ. ಆದ್ರೆ ಇದಕ್ಕೆ ಕೆಲವರು ಸಕ್ಕರೆ ಹಾಕಿ ತಿಂತಾರೆ. ಇದು ತಪ್ಪು,ಬೆಳಿಗ್ಗೆ ಯಾವುದೇ ತಿಂಡಿ, ಪಾನೀಯ ಸೇವಿಸಿದ್ರು, ಅದಕ್ಕೆ ಸಕ್ಕರೆ ಮಾತ್ರ ಬಳಸಬೇಡಿ.

ಕರಿದ ತಿಂಡಿ- ಹಲವರಿಗೆ ಬೆಳಿಗ್ಗೆ ತಿಂಡಿಗೆ, ಇಡ್ಲಿ ಜೊತೆ ವಡಾ ತಿನ್ನೋ ಚಾಳಿ ಇರತ್ತೆ. ಅಥವಾ ಪುರಿಯಂಥ ಕರಿದ ತಿಂಡಿ ತಿನ್ನುತ್ತಾರೆ. ಇದು ರುಚಿಯಾಗಿರತ್ತೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಬೊಜ್ಜು ಬರತ್ತೆ. ಹೊಟ್ಟೆ ಬೆಳೆಯುತ್ತದೆ. ಮತ್ತು ಇದು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗುವುದಲ್ಲದೇ, ಹಾರ್ಟ್‌ ಅಟ್ಯಾಕ್‌ಗೂ ಕಾರಣವಾಗತ್ತೆ.

ಜ್ಯೂಸ್- ಇದೇನಪ್ಪಾ ಜ್ಯೂಸ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತಾ ನೀವು ಅಂದುಕೊಳ್ಳಬಹುದು. ಹೌದು, ನಿಜ. ಹಣ್ಣಿನ ರಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ನೀವು ಮನೆಯಲ್ಲಿ ಹಣ್ಣಿನ ರಸ ತೆಗೆದು ಕುಡಿದರೆ ಉತ್ತಮ. ಅದೇ ಅಂಗಡಿಯಿಂದ ತಂದ ಪ್ಯಾಕೆಟ್ ಜ್ಯೂಸ್ ಎಂದಿಗೂ ಬಳಸಬೇಡಿ. ಮತ್ತು ಆಫೀಸಿಗೆ ಹೋಗುವಾಗ, ಅಂಗಡಿಯಲ್ಲಿ ಫ್ರೆಶ್ ಜ್ಯೂಸ್ ಸಿಗತ್ತೆ ಅಂತಾ ಕುಡಿಯುವಾಗ ಹುಷಾರಾಗಿರಿ. ಯಾಕಂದ್ರೆ ಹಣ್ಣಿನ ಜೊತೆ ಲೋಡ್‌ಗಟ್ಟಲೆ ಸಕ್ಕರೆಯನ್ನೂ ಸುರಿದಿರ್ತಾರೆ. ಹಾಗಾಗಿ ಸಕ್ಕರೆ ಬಳಸದೇ, ಜ್ಯೂಸ್ ಮಾಡಿಸಿ ಕುಡಿಯಿರಿ.

ಇನ್ನು ಕೊನೆಯದಾಗಿ, ಬ್ರೆಡ್, ಬನ್, ಬಿಸ್ಕೀಟ್ಸ್, ಕೇಕ್, ಕುಕೀಸ್, ಕಾಫೀ, ಟೀ, ಮಾಂಸಾಹಾರ ಇವೆಲ್ಲ ಯಾವುದೇ ಕಾರಣಕ್ಕೂ ಬೆಳಿಗ್ಗೆ ಸೇವಿಸಲು ಹೋಗಲೇಬೇಡಿ. ಇದರಿಂದ ನಿಮ್ಮ ದೇಹದ ಬೊಜ್ಜು ಬೆಳೆಯುತ್ತೆ. ಸಕ್ಕರೆ ಖಾಯಿಲೆ ಬರುವ ಸಾಧ್ಯತೆಯೂ ಇದೆ. ಹಾಗಾಗಿ ಇಂಥ ಆಹಾರಗಳೆಲ್ಲ ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ.

- Advertisement -

Latest Posts

Don't Miss