- Advertisement -
Political News: ಪ್ರಪ್ರಥಮ ಬಾರಿಗೆ ಕೆಆರ್‌ಎಸ್ ಡ್ಯಾಮ್ ಜೂನ್ ತಿಂಗಳಲ್ಲೇ ತುಂಬಿ ಹರಿಯುತ್ತಿದೆ. ಈ ಕಾರಣಕ್ಕೆ ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಡ್ಯಾಮ್‌ಗೆ ಬಾಗೀನ ಕೂಡ ಅರ್ಪಿಸಿದ್ದಾರೆ.
ಈ ಬಗ್ಗೆ ಇಂದು ವಾಗ್ದಾಳಿ ನಡೆಸಿರುವ ಸಿಎಂ, ವಿರೋಧ ಪಕ್ಷದವರು ತಮ್ಮ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳನ್ನು ನೆನಪಿಸಿ ವ್ಯಂಗ್ಯವಾಡಿದ್ದಾರೆ.
“ನನ್ನ ಕಾಲ್ಗುಣ ಸರಿಯಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಬರ ಬರುತ್ತೆ” ಎಂದು ಮೌಢ್ಯ ಬಿತ್ತುತ್ತಿದ್ದ ಮೂಢಾತ್ಮರಿಗೆ ಪ್ರಕೃತಿ ಮಾತೆಯೇ ತಾಪರಾಕಿ ಬಾರಿಸಿದ್ದಾಳೆ. 92 ವರ್ಷಗಳ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಕಾಲ್ಗುಣ, ಕೈಗುಣಗಳೆಲ್ಲ ಆತ್ಮವಂಚನೆಯ ಮಾತುಗಳಷ್ಟೆ, ಪ್ರಕೃತಿಯ ಮುಂದೆ ಎಲ್ಲವೂ ನಗಣ್ಯ.
2023-24ರಲ್ಲಿ ಡ್ಯಾಮ್‌ನಲ್ಲಿ ನೀರು ತುಂಬಿರಲಿಲ್ಲ. ಆಗ ವಿರೋಧ ಪಕ್ಷದವರು ಬೊಬ್ಬೆ ಹಾಕಲು ಶುರು ಮಾಡಿದ್ರು. ಸಿದ್ದರಾಮಯ್ಯ ಸಿಎಂ ಆಗಿದ್ದೇ ಆಗಿದ್ದು, ಬರಗಾಲ ಬಂತು. ಸಿದ್ದರಾಮಯ್ಯನವರ ಕಾಲ್ಗುಣ ಚೆನ್ನಾಗಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲ್ಗುಣ ಚೆನ್ನಾಗಿಲ್ಲ. ಡಿಕೆಶಿ ಕಾಲ್ಗುಣ ಚೆನ್ನಾಗಿಲ್ಲ ಎಂದರು. ಇಂಥವರ ಮಾತಿಗೆ ಗಾಂಧೀಜಿಯವರು 1 ಮಾತು ಹೇಳಿದ್ದರು. ಪ್ರಕೃತಿ ನಿಮ್ಮ ಆಸೆಗಳನ್ನೆಲ್ಲ ಪೂರೈಸುತ್ತದೆ. ದುರಾಸೆಗಳನ್ನಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.
https://youtu.be/z-5RjkoiRG4
- Advertisement -