Wednesday, November 26, 2025

Latest Posts

ಗೃಹಲಕ್ಷ್ಮಿರಿಗೆ ಭರ್ಜರಿ ಲಾಭ ಸದಸ್ಯರ ನೋಂದಣಿ ಹೇಗೆ?

- Advertisement -

ಗೃಹಲಕ್ಷ್ಮೀ ಫಲಾನುಭವಿಗಳಿಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಿಸಿದೆ. ಗೃಹಲಕ್ಷ್ಮೀ ಸಂಘ ಬದಲಾಗಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ರಚನೆ ಮಾಡಲಾಗಿದೆ. ರಾಜ್ಯಾದ್ಯಂತ ಒಂದೇ ಸೊಸೈಟಿ ಇರಲಿ ಎಂಬ ಕಾರಣಕ್ಕೆ, ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಎಂದು ಹೆಸರು ಇಡಲಾಗಿದೆ.

ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ, ಇದುವರೆಗೂ 2 ಸಾವಿರ ಗೃಹಲಕ್ಷ್ಮೀ ಫಲಾನುಭವಿಗಳು ಸದಸ್ಯತ್ವವನ್ನ ಪಡೆದುಕೊಂಡಿದ್ದಾರೆ. 1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳನ್ನ ಸದಸ್ಯರನ್ನಾಗಿ ಮಾಡಿಕೊಳ್ಳಲು ಗುರಿ ಇಡಲಾಗಿದೆ.

ಸಹಕಾರಿ ಸಂಘ ಈಗಷ್ಟೇ ರಚನೆ ಆಗಿದ್ದು, ಆರು ತಿಂಗಳ ಬಳಿಕ ಫಲಾನುಭವಿಗಳಿಗೆ ಸಹಕಾರಿ ಸಂಘದಿಂದ ಸಾಲ ನೀಡಲಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಗುರಿ ಇಟ್ಟುಕೊಳ್ಳಲಾಗಿದೆ.

ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಹೇಗೆ ನೋಂದಣಿ ಮಾಡಿಕೊಳ್ಳುವುದು ಅನ್ನೋದನ್ನ ನೋಡೋದಾದ್ರೆ,

1. ಪ್ರತಿ ಸದಸ್ಯೆ 1 ಬಾರಿ ನೋಂದಣಿ ಮಾಡಿಕೊಳ್ಳಬಹುದು
2. 1,250 ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು
3. 1250 ರೂ.ಗಳಲ್ಲಿ 1 ಸಾವಿರ ಡೆಪಾಸಿಟ್ ಆಗಿರುತ್ತದೆ
4. 100 ರೂಪಾಯಿ ಪ್ರವೇಶ ಶುಲ್ಕ
5. 150 ರೂಪಾಯಿ ನೋಂದಣಿ ಶುಲ್ಕ
6. ಒಂದು ಬಾರಿ 1250 ರೂಪಾಯಿ ಕಟ್ಟಿದ್ದರೆ ಸಾಕು7. ಪ್ರತಿ ತಿಂಗಳು ಅಮೌಂಟ್ ಕಟ್ಟುವಂತಿಲ್ಲ
8. ಅಂಗನವಾಡಿ ಕಾರ್ಯಕರ್ತೆಯರು ಸದಸ್ಯರಾಗಬಹುದು
9. ಸದಸ್ಯತ್ವ ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿ

ಇನ್ನು, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಒಟ್ನಲ್ಲಿ ಮಾಜಿ ಸಚಿವೆ ಮೋಟಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊತ್ತಿದ್ರು. ಆಗ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳನ್ನು ಜಾರಿಗೊಳಿಸಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದ್ರು. ಲಕ್ಷಾಂತರ ಹೆಣ್ಣುಮಕ್ಕಳ ಜೀವನ ಹಸನು ಮಾಡಿದ್ರು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೂಡ ಇದೇ ಮಾದರಿಯಲ್ಲಿ ಹೆಜ್ಜೆ ಹಾಕಿದ್ದಾರೆ.

- Advertisement -

Latest Posts

Don't Miss